ADVERTISEMENT

ಮಾನವೀಯತೆ ಎಂದರೆ ನಿಸ್ವಾರ್ಥ ಸೇವೆ: ರೊನಾಲ್ಡ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ದೇವನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ರೈತರ ಮಕ್ಕಳ ಕಲ್ಯಾಣಕ್ಕೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡರೆ ಮಾನವೀಯತೆಗೆ ಸರಿಯಾದ ಅರ್ಥ ಬರುತ್ತದೆ ಎಂದು ಹಾಲಿವುಡ್ ಸ್ವಿಸಸ್ ಟೌನ್ ಸ್ಥಾಪಕ ರೊನಾಲ್ಡ್ ಕೊಲಾಸೊ ಅಭಿಪ್ರಾಯಪಟ್ಟರು.

ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಗ್ರಾಮದ ಬಳಿಯ ಹಾಲಿವುಡ್ ಸ್ವಿಸ್ ಟೌನ್‌ನಲ್ಲಿ ದೇವನಹಳ್ಳಿ ನಾಗರಿಕರ ಪರ ವಾಗಿ ಶಾಸಕ ಕೆ.ವೆಂಕಟಸ್ವಾಮಿ ಗುರು ವಾರ ಏರ್ಪಡಿಸಿದ್ದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೇವಲ ಇಲಾಖೆ ಮತ್ತು ಸರ್ಕಾ ದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಲಕ್ಷಾಂತರ ಜನರು ಕಷ್ಟದಲ್ಲಿ ಬದುಕುತ್ತಿದ್ದಾರೆ. ಅಂಥವರ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣ ಬೇಕು ಇದಕ್ಕಾಗಿ ಸಾಮಾಜಿಕ ಸೇವೆ ಅವಶ್ಯ. ಇದು ಶಾಶ್ವತ ಪರಂಪರೆಗೆ ಮಾದರಿಯಾಗಿರಬೇಕು ಎಂದರು.

ರೊನಾಲ್ಡ್ ಕೊಲಾಸೊರನ್ನು ಸನ್ಮಾ ನಿಸಿ ಮಾತನಾಡಿದ ಶಾಸಕ ಕೆ.ವೆಂಕಟ ಸ್ವಾಮಿ, ಪಟ್ಟಣದ ತಾಲ್ಲೂಕು ಆಡಳಿತ ಕಚೇರಿ ಮಿನಿ ವಿಧಾನಸೌಧದಲ್ಲಿ ಅಗತ್ಯ 30ಲಕ್ಷರೂ ವೆಚ್ಚದ ಪೀಠೋಪಕರಣ ಕೊಡುಗೆ ನೀಡಿರುವುದು ಶ್ಲಾಘನೀಯ ಎಂದರು.

ಸಾದಹಳ್ಳಿ ಸರ್ಕಾರಿ ಪ್ರೌಢಶಾಲಾ ಹೆಚ್ಚುವರಿ ಕೊಠಡಿಗಳು, ಕನ್ನಮಂಗಲ ಗ್ರಾಮ ಪಂಚಾಯಿತಿಗೆ ತ್ಯಾಜ್ಯ ವಿಲೇ ವಾರಿಗಾಗಿ ಉಚಿತ ಟ್ಯ್ರಾಕ್ಟರ್ ಮತ್ತು ಕೊಳವೆ ಬಾವಿ ಸಂಪರ್ಕ, ಜಾಲಿಗೆ ಮತ್ತು ಕನ್ನಮಂಗಲ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯ 3,800 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್ ಮತ್ತು ನೋಟ್ ಪುಸ್ತಕ ಉಚಿತವಾಗಿ ವಿತರಣೆ, ತಾಲ್ಲೂಕು ಕಚೇರಿ ಹಳೆ ಕಟ್ಟಡದ ಬಳಿ ನೂತನ ಕಚೇರಿ ಕಟ್ಟಡ ನಿರ್ಮಾಣ, ನ್ಯಾಯಾಲಯದ ವಸತಿ ಸಮುಚ್ಛಾಯಕ್ಕೆ ನೆರವು, ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಅವರ ಕೊಡು ಗೆಗಳು ತಾಲ್ಲೂಕಿನ ಜನತೆಗೆ ಸಂದಿವೆ, ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯ ಸೇವೆಗೆ ಗೌರವ ನೀಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗ ನ್ನಾಥ್, ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಟೌನ್ ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ಎನ್.ರಘು, ತಾಲ್ಲೂಕು ಖಾದಿಬೋರ್ಡ್ ಅಧ್ಯಕ್ಷ ಕೆ.ಪಟಾಲಪ್ಪ, ಕನ್ನಮಂಗಲ ಗ್ರಾ.ಪಂ. ಅಧ್ಯಕ್ಷ ಮೂರ್ತಿ, ತಾಲ್ಲೂಕು ವಕ್ಫ್  ಬೋರ್ಡ್ ಅಧ್ಯಕ್ಷ ರೊಲಾಸಾಬ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸೋಮಶೇಖರ್, ಡಿ.ನಾರಾಯಣ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.