ADVERTISEMENT

ಸಹಕಾರ ಸಂಘಗಳಿಂದ ಮಹಿಳಾ ಸಬಲೀಕರಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 3:30 IST
Last Updated 1 ಅಕ್ಟೋಬರ್ 2012, 3:30 IST

ಆನೇಕಲ್: ಮಹಿಳೆಯರ ಅಭಿವೃದ್ಧಿಗಾಗಿ ಸಹಕಾರ ಸಂಘಗಳು ಶ್ರಮಿಸುತ್ತಿದ್ದು ಇವುಗಳನ್ನು ಮಹಿಳಾ ಸಂಘಗಳು ಸಮರ್ಪಕ ರೀತಿಯಲ್ಲಿ ಬಳಸಿಕೊಂಡರೆ ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ ಎಂದು ಸಹಕಾರಿ ಸಂಘಗಳ ಅಭಿವೃದ್ಧಿಯ ಅಧಿಕಾರಿ ಸುಲ್ತಾನ್ ತಿಳಿಸಿದರು.

ಅವರು ಚಂದಾಪುರದ ಧನಲಕ್ಷ್ಮೆ ಮಹಿಳಾ ವಿವಿಧೋದ್ದೆೀಶ ಸಹಕಾರ ಸಂಘದ ನೂತನ ಕಚೇರಿಯ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಯೋಜನೆಗಳಲ್ಲಿ ಪ್ರಮುಖವಾಗಿ ಸ್ವಯಂ ಉದ್ಯೋಗ, ಟೈಲರಿಂಗ್, ಟೈಪ್‌ರೈಟಿಂಗ್, ಗೃಹಬಳಕೆಯ ತಯಾರಿಕೆ ಮುಂತಾದ ವಿವಿಧ ರೀತಿಯ ಉದ್ದೆೀಶಗಳಿಗೆ ಸಾಲವನ್ನು ನೀಡಲಾಗುತ್ತಿದೆ. ಈ ಮೂಲಕ ಅವರು ವೈಯಕ್ತಿಕವಾಗಿ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಹಕಾರಿ ಸಂಘಗಳು ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಧನಲಕ್ಷ್ಮೆಮಹಿಳಾ ವಿವಿಧೋದ್ದೆೀಶ ಸಹಕಾರ ಸಂಘದ ಅಧ್ಯಕ್ಷೆ ಎಂ.ನಾಗವೇಣಿ ಮಾತನಾಡಿ, ಇಂದು ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಹಾಗೂ ಶೋಷಣೆಯನ್ನು ಮೆಟ್ಟಿ ನಿಂತು ಆರ್ಥಿಕವಾಗಿ ಸದೃಢತೆಯನ್ನು ಸಾಧಿಸಿ ಸಮಾಜದ ಮುಖ್ಯ ವಾಹಿನಿಗೆ ಬಂದಿರುವ ಸಾವಿರಾರು ಮಹಿಳೆಯರ ಪಾಲಿಗೆ ಸಹಕಾರಿ ಸಂಘಗಳು ವರದಾನವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಚಂದಾಪುರದ ಶಾರದಾಶ್ರಮದ ರಮಾ ಪ್ರಿಯಾಂಬ ಮಾತನಾಡಿದರು. ಹಿರಿಯ ಲೆಕ್ಕ ಪರಿಶೋಧನಾಧಿಕಾರಿ ನಾರಾಯಣ್, ಕೃಷ್ಣಾರೆಡ್ಡಿ, ನಾರಾಯಣ ರೆಡ್ಡಿ, ಜೆಡಿಎಸ್ ಮುಖಂಡ ಜಗನಾಥ್ ರೆಡ್ಡಿ , ಭಗತ್‌ಸಿಂಗ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಳ್ಳೂರು ಬಾಬು, ಕರವೇ ಅತ್ತಿಬೆಲೆಯ ಅಧ್ಯಕ್ಷ ಸಿ.ರವಿಕುಮಾರ್, ಸೂರ್ಯನಾರಾಯಣ, ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಎನ್.ಪ್ರಮೀಳಾ, ಎಸ್,ವನಜಾಕ್ಷಿ, ಪಿ.ಅನುರಾಧ, ಟಿ.ಭಾಗ್ಯ, ಪುಷ್ಪಾ, ಬಿ.ಎಲ್.ಶಾಂತಾ ಇದ್ದರು.         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.