ADVERTISEMENT

ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 5:16 IST
Last Updated 9 ಅಕ್ಟೋಬರ್ 2017, 5:16 IST
ತಗ್ಗಿಕುಪ್ಪೆ ಗ್ರಾಮದ ರೈತ ಟಿ.ಶೇಷಾದ್ರಿ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಬೆಳೆದಿರುವ ಕುಂಬಳ ಕಾಯಿ
ತಗ್ಗಿಕುಪ್ಪೆ ಗ್ರಾಮದ ರೈತ ಟಿ.ಶೇಷಾದ್ರಿ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಬೆಳೆದಿರುವ ಕುಂಬಳ ಕಾಯಿ   

ಮಾಗಡಿ: ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಸಿಕೊಡು ಭೂಮಿಯ ಫಲವತ್ತತೆ ಉಳಿಸಿ, ಆರೋಗ್ಯ ಗಳಿಸಲು ಮುಂದಾಗಬೇಕು ಎಂದು ಸಾಂಪ್ರದಾಯಿಕ ಕೃಷಿ ಪಂಡಿತ ಟಿ. ಶೇಷಾದ್ರಿ ತಿಳಿಸಿದರು. ತಗ್ಗಿಕುಪ್ಪೆಯ ತೋಟದಲ್ಲಿ ಭಾನುವಾರ ರೈತರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು,

‘ನಮ್ಮ ಪೂರ್ವಿಕರು ಹೊಲಗದ್ದೆಗಳಿಗೆ ಎಂದೂ ರಸಗೊಬ್ಬರ ಬಳಸುತ್ತಿರಲಿಲ್ಲ. ಬದಲಾಗಿ ಪ್ರಾಣಿಗಳ ಸೆಗಣಿ, ಗಂಜಳ, ಹಸಿರೆಲೆಗೊಬ್ಬರ, ಕೆರೆಯ ಗೋಡು ಮಣ್ಣು, ಒಣಗಿದ ತರಗು, ಹೊಂಗೆ, ಬೇವು, ಹಿಪ್ಪೆಯ ಹಿಂಡಿಯನ್ನು ಭೂಮಿಗೆ ಹಾಕಿ, ಕೊರಲೆ, ನವಣೆ, ಜೋಳ, ರಾಗಿ, ಸಾಮೆ, ದೊಡ್ಡಿಭತ್ತ, ಇತರೆ ದೇಶೀಯ ಬೆಳೆಗಳನ್ನು ಬೆಳೆಯುತ್ತಿದ್ದರು’ ಎಂದರು.

ಪೌಷ್ಟಿಕತೆಯ ಜೊತೆಗೆ ಅಮೃತ ಸಮಾನವಾದ ಆಹಾರಧಾನ್ಯಗಳನ್ನು ಬೆಳೆದು, ದುಡಿದು ಉಂಡು, ಬೆವರು ಸುರಿಸಿ, ಜಗಜಟ್ಟಿಗಳಾಗಿದ್ದರು ಎಂದರು. ರೈತರು ಸಾವಯವ ಕೃಷಿ ಎಂಬುದು ಬರಿ ಬುರುಡೆ ಪುರಾಣವಿದ್ದಂತೆ. ಬದಲು ಸಾಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಇಂದು ಆಧುನಿಕತೆಯ ಹೆಸರಿನಲ್ಲಿ ರಸಗೊಬ್ಬರ ಹಾಕಿ ಭೂಮಿಯಲ್ಲಿನ ಫಲವತ್ತೆಯನ್ನು ನಾಶ ಮಾಡಿದ್ಧೇವೆ ಎಂದು ಸಾಂಪ್ರದಾಯಿಕ ಕೃಷಿ ಪಂಡಿತರು ತಿಳಿಸಿದರು.

ADVERTISEMENT

ಪ್ರಗತಿಪರ ರೈತ ಕುಂಬಳ ಕಾಯಿ ಗಂಗಣ್ಣ ಮಾತನಾಡಿ, ಸಾಂಪ್ರದಾಯಿಕ ಕೃಷಿ ಮೂಲಕ ರಸಗೊಬ್ಬರ ಬಳಸದೆ 350 ಜಂಬುನೇರಳೆ, 200 ಪರಂಗಿ ಗಿಡ, 300 ನುಗ್ಗೆ ಗಿಡ, 200 ನಿಂಬೆ, 2 ಎಕರೆಯಲ್ಲಿ ನಾಟಿ ಅವರೆ, 1 ಎಕರೆಯಲ್ಲಿ ಬಾಳೆ, 10 ಟನ್‌ ಕುಂಬಳಕಾಯಿಯನ್ನು ಶೇಷಾದ್ರಿ ಅವರು ಬೆಳೆದಿದ್ದಾರೆ. ಅವರ ತೋಟ ತಾಲ್ಲೂಕಿನ ರೈತರಿಗೆ ಕೃಷಿ ಕಾರ್ಯಾಗಾರವಿದ್ದಂತೆ ಎಂದರು. ರೈತ ಮುಖಂಡ ಕೃಷ್ಣಪ್ಪ ಹಾಗೂ ರೈತರು ಇಡೀ ದಿನ ತೋಟದಲ್ಲಿ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.