ADVERTISEMENT

‘ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೆ ಒತ್ತು’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 10:43 IST
Last Updated 20 ಸೆಪ್ಟೆಂಬರ್ 2013, 10:43 IST

ಆನೇಕಲ್‌: ಅತ್ತಿಬೆಲೆ ತಾಲ್ಲೂಕಿನ ಗಡಿ ಭಾಗವಾಗಿದ್ದು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಬಿ.ಶಿವಣ್ಣ ನುಡಿದರು.

ಅವರು ತಾಲೂ್ಲಕಿನ  ಅತಿ್ತಬೆಲೆ ಯಲ್ಲಿ ` 17.5ಲಕ್ಷ  ವೆಚ್ಚದ ಪಶು ವೈದ್ಯಕೀಯ ಆಸ್ಪತೆ್ರಗೆ ಶಂಕು ಸಾ್ಥಪನೆ ನೆರವೇರಿಸಿ ಮಾತನಾಡಿದರು.

ಅತಿ್ತಬೆಲೆ ಸರ್ಕಾರಿ ಪಾ್ರಥಮಿಕ ಆರೋಗ್ಯ ಕೇಂದ್ರ ಶಿಥಿಲವಾಗಿದ್ದು ರಿಪೇ ರಿಗಾಗಿ ಜಿಲಾ್ಲ ಪಂಚಾಯಿತಿ ವತಿ ಯಿಂದ ` 5ಲಕ್ಷ ಅನುದಾನ ಮಂಜೂ ರಾಗಿದೆ. ಮುಂಬರುವ ದಿನ ಗಳಲ್ಲಿ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಹೈಟೆಕ್‌ ಆಸ್ಪತೆ್ರ ಸಾ್ಥಪಿಸಲು ಪ್ರಯತ್ನ ಮಾಡಲಾಗುವುದು ಎಂದರು.

ಅತಿ್ತಬೆಲೆ ಬಸ್‌ ನಿಲಾ್ದಣದ ಜಾಗವು ಗಾ್ರಮ ಪಂಚಾಯಿತಿಯ ಆಸಿ್ತ ಯಾಗಿದೆ. ಪಂಚಾಯಿತಿ ನಿರ್ಣಯ ಕೈಗೊಂಡು ಸಾರಿಗೆ ಇಲಾಖೆಗೆ ಹಸ್ತಾಂತರ ಮಾಡಿದರೆ ಶೀಘ್ರದಲ್ಲಿ 10ಕೋಟಿ ರೂ. ವೆಚ್ಚದಲ್ಲಿ ಅತಾ್ಯಧುನಿಕ ಸೌಲಭ್ಯವುಳ್ಳ ಬಸ್‌ ನಿಲಾ್ದಣ ನಿರ್ಮಾಣ ಮಾಡಲಾ ಗುವುದು ಎಂದರು.

ಜಿಲಾ್ಲ ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ ಮಾತನಾಡಿ ಅತಿ್ತಬೆಲೆ ಯಲ್ಲಿ ಜನಸಂಖ್ಯೆ ಹೆಚಾ್ಚಗಿದೆ ಹಾಗೂ ಕೈಗಾರಿಕಾ ಪ್ರದೇಶ ಸಮೀಪ ದಲಿ್ಲಯೇ ಇರುವುದರಿಂದ ಗಾ್ರಮಕೆ್ಕ ಹೆಚಿ್ಚನ ಅನುದಾನ ಬಿಡುಗಡೆ ಮಾಡಬೇಕು ಎಂದರು.

ಅತಿ್ತಬೆಲೆಗೆ ಬಿಗ್ ಟ್ರಂಕ್‌ ಬಸ್‌ ಸೌಲಭ್ಯವನು್ನ ಕಲಿ್ಪಸಿ ಪ್ರತಿದಿನ 275 ಟಿ್ರಪ್‌ ಸಂಚರಿಸಲು ಅನುವು ಮಾಡಿ ಕೊಟಿ್ಟರುವುದಕೆ್ಕ ಸಾರಿಗೆ ಸಚಿವ ರಾಮಲಿಂಗಾರೆಡಿ್ಡ ಹಾಗೂ ಶಾಸಕ ಬಿ.ಶಿವಣ್ಣ ಅವರನು್ನ ಅಭಿನಂದಿ ಸುವುದಾಗಿ ನುಡಿದರು.
ಅತಿ್ತಬೆಲೆಯಿಂದ ಶಿವಾಜಿನಗರಕೆ್ಕ ಬಸ್‌ ಸೌಲಭ್ಯವನು್ನ ಕಲಿ್ಪಸಿಕೊಡ ಬೇಕೆಂದು ಅವರು ಮನವಿ ಮಾಡಿ ದರು.

ವಿಧಾನ ಪರಿಷತ್‌ ಸದಸ್ಯ ದಯಾನಂದ ರೆಡ್ಡಿ, ಜಿಲಾ್ಲ ಪಂಚಾ ಯಿತಿ ಸದಸ್ಯರಾದ ಕೆ.ಸಿ.ರಾಮಚಂದ್ರ, ಪ್ರಭಾಕರ ರೆಡ್ಡಿ, ಶಾಂತಮ್ಮ, ಪ್ರಜಾ ವಿಮೋಚನಾ ಚಳವಳಿ ರಾಜ್ಯ ಘಟಕದ ಅಧ್ಯಕ್ಷ ಪಟಾಪಟ್‌ ನಾಗರಾಜು, ಜಿಲಾ್ಲ ಕಾಂಗೆ್ರಸ್‌ ಉಪಾಧ್ಯಕ್ಷ ಸಿ.ನಾಗರಾಜು, ಪಶುಪಾಲನಾ ಇಲಾಖೆ ಬೆಂಗಳೂರು ನಗರ ಜಿಲಾ್ಲ ಉಪನಿರ್ದೇಶಕ ಡಾ.ಪ್ರಕಾಶ್‌ರೆಡ್ಡಿ, ಬಾ್ಲಕ್‌ ಕಾಂಗೆ್ರಸ್‌ ಅಧ್ಯಕ್ಷ  ಚಂದ್ರಪ್ಪ, ಟೌನ್‌ ಕಾಂಗೆ್ರಸ್‌ ಅಧ್ಯಕ್ಷ ಜಿ.ಗೋಪಾಲ್‌, ಅತ್ತಿಬೆಲೆ ಗಾ್ರಪಂ ಅಧ್ಯಕೆ್ಷ ಡಾ.ಸುಲೋಚನಾ, ಚಂದಾಪುರ ಗಾ್ರಪಂ ಅಧ್ಯಕೆ್ಷ ನಾಗವೇಣಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸುನಂದಾ ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಕೆ.ಸತ್ಯಪ್ಪ, ಕಾಂಗೆ್ರಸ್‌ ಮುಖಂಡರಾದ ಗುಡ್ಡಹಟಿ್ಟ ಶಂಭಪ್ಪ, ನರಸಿಂಹಮೂರ್ತಿ, ಓ.ದೇವರಾಜು ಮತಿ್ತತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.