ADVERTISEMENT

‘ಗ್ರಾಮಸ್ಥರಲ್ಲಿ ಪರಿಸರ ಸ್ವಚ್ಛತೆ ಅವಶ್ಯ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 11:16 IST
Last Updated 18 ಮಾರ್ಚ್ 2014, 11:16 IST

ದೇವನಹಳ್ಳಿ: ಜಾಗತೀಕರಣ ವೃದ್ಧಿಸುತ್ತಾ ಗ್ರಾಮೀಣ ಜೀವನ ಕಡಿಮೆಯಾಗಿ ಪರಿಸರ ನಗಣ್ಯವಾಗುತ್ತಿದ್ದು, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಜೆ.ಎಸ್.ವೀಣಾ ತಿಳಿಸಿದರು.

ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿಬಿರದ ಗೌರವ ಸಲಹೆಗಾರ ಅಮಿರ್‌ ಪಾಷ, ಎನ್ಎಸ್ಎಸ್ ಕಾರ್ಯ ಕ್ರಮಾಧಿಕಾರಿ ಡಾ.ಡಿ.ಸಿ. ರಾಮ ಕೃಷ್ಣಪ್ಪ ಮಾತನಾಡಿದರು.

ಸಹ ಶಿಬಿರಾಧಿಕಾರಿ ರವಿಚಂದ್ರ, ಕುಂದಾಣ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ, ಪಿ.ಡಿ.ಓ ಜಯರಾಮೇ ಗೌಡ, ಮುಖ್ಯ ಶಿಕ್ಷಕ ಶಿವಪ್ರಸಾದ್, ಪ್ರಾಧ್ಯಾಪಕಿ ನೀರಜಾದೇವಿ, ರಜಿನಿ, ಚಂದ್ರಕಲಾ, ಲಲಿತಮ್ಮ, ದೊರೆ ಸ್ವಾಮಿ, ನಾಗಭೂಷಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.