ADVERTISEMENT

‘ವಿವೇಕಾನಂದರು ಯುವಕರಿಗೆ ಸದಾ ಸ್ಫೂರ್ತಿ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 9:48 IST
Last Updated 12 ಡಿಸೆಂಬರ್ 2013, 9:48 IST

ಕನಕಪುರ:ಸ್ವಾಮಿ ವಿವೇಕಾನಂದರು ವಿಶ್ವದ ಯುವ ಸಮೂಹಕ್ಕೆ ಸ್ಫೂರ್ತಿ ಯ ಸೆಲೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರವಿ ಹೇಳಿದರು. ವಿವೇಕಾನಂದರ 150ನೇ ಜಯಂತಿ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣಕ್ಕೆ ಆಗಮಿಸಿದ ವಿವೇಕಾನಂದರ ರಥ ಯಾತ್ರೆಯ ಸಾರ್ವಜನಿಕರ ಸಭೆಯಲ್ಲಿ ಪಾಲ್ಗೊಂಡು  ಅವರು ಮಾತ ನಾಡಿದರು. 

ವಿವೇಕಾನಂದರು ಭಾರತ ಮಾತ್ರ ವಲ್ಲದೆ ಪ್ರಪಂಚದ ಎಲ್ಲಾ ರಾಷ್ಟ್ರಗ ಳಲ್ಲೂ ಗೌರವಿಸಲ್ಪಡುವ ಮಹಾನ್ ವ್ಯಕ್ತಿ. ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತ. ಅವರ ಸಂದೇಶ ವನ್ನು ಯುವ ಜನಾಂಗಕ್ಕೆ ತಲುಪಿಸಲು ರಾಮಕೃಷ್ಣ ಮಠದ ಮೂಲಕ ರಥ ಯಾತ್ರೆ ನಡೆಸಲಾಗುತ್ತಿರುವುದು ಶ್ಲಾಘ ನೀಯ ಎಂದರು.

ಭವತಾರಿಣಿ ಆಶ್ರಮದ ಮಾತಾಜೀ ವಿವೇಕಮಯಿ, ರಾಮಕೃಷ್ಣ ಮಠದ ತ್ಯಾಗೀಶ್ವರಾನಂದಜಿ ಮಾತನಾಡಿದರು. ರಥಯಾತ್ರೆಯನ್ನು ಕರವೇ ಮುಖಂಡ ಕಬ್ಬಾಳೇಗೌಡ, ಜಯ ಕರ್ನಾಟಕ ಸಂಘಟನೆಯ ಕೆ.ವಿ. ಆನಂದ್, ರಾಜೇಂದ್ರ, ಹಿಂದೂ ಜಾಗ ರಣಾ ವೇದಿಕೆಯ ವೆಂಕಟೇಶ್, ಎ.ಬಿ. ವಿ.ಪಿ.ರಘುರಾಮು, ಬಿ.ಜೆ.ಪಿ.ನಾಗ ರಾಜು, ಆರ್.ಎಸ್.ಎಸ್.ನ ಅಣ್ಣಿ, ಲಯನ್ ವೆಂಕಟೇಶ್ ಸೇರಿದಂತೆ ಅನೇಕ ಹಿಂದೂಪರ ಸಂಘಟನೆಯ ಮುಖ್ಯಸ್ಥರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.