ADVERTISEMENT

‘ಸಂಘಟನೆಗೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:59 IST
Last Updated 17 ಡಿಸೆಂಬರ್ 2013, 8:59 IST

ದೇವನಹಳ್ಳಿ: ಬರಲಿರುವ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ಪದಾಧಿ ಕಾರಿಗಳು ಕಾರ್ಯಕರ್ತರ ಜೊತೆ ಗೂಡಿ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಿ.ಜೆ.ಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಎ.ಸಿ.ಗುರುಸ್ವಾಮಿ ಹೇಳಿದರು.

ಪಟ್ಟಣದ ಮಾಜಿ ಶಾಸಕ ಜಿ.ಚಂದ್ರಣ್ಣ ನಿವಾಸದ ಆವರಣದಲ್ಲಿ ಪಕ್ಷದ ವಿವಿಧ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಸಭೆಯಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.

ಕಾರ್ಯಕರ್ತರಿಂದಲೇ ಪಕ್ಷ ಎಂಬುದು ಎಲ್ಲಾ ರಾಜಕೀಯ ಪಕ್ಷಗಳ ನಿಲುವಾದರೂ ವಿಶೇಷವಾಗಿ
ಬಿಜೆಪಿಗೆ ಯುವ ಪಡೆ ಸ್ವಯಂ ಪ್ರೇರಿತವಾಗಿ ಬರುತ್ತಿರುವುದು ಉತ್ತಮ ಬೆಳವಣಿಗೆ. ಆದ್ದರಿಂದ ಪಕ್ಷದ ಮತದಾರರನ್ನು ಬಿಜೆಪಿಯ ತತ್ವ ಸಿದ್ಧಾಂತ, ಭವಿಷ್ಯದಲ್ಲಿ ಭಾರತದ ಕನಸು ಏನು ಎಂಬುದರ ಸಂಪೂರ್ಣ ಪರಿಕಲ್ಪನೆ ಮೇಲೆ ಮತ ನೀಡುವಂತೆ ಕೋರಬೇಕು. ಇತರೆ ರಾಜಕೀಯ ಪಕ್ಷಗಳ ವೈಫಲ್ಯದ ಬಗ್ಗೆ ಮನವರಿಕೆ ಮಾಡಿಕೊಡಬೇಕು.  ಹೆಚ್ಚಿನ ಸಂಖ್ಯೆ ಯಲ್ಲಿ ಬಿಜೆಪಿ ಮತದಾರರನ್ನು ಈಗಿ ನಿಂದಲೇ ರೂಪಿಸಲು ಧೃಡ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಕೆ.ನಾಗೇಶ್‌, ಕಾರ್ಯದರ್ಶಿ ದೇ.ಸು.ನಾಗರಾಜ್‌ ಇದ್ದರು.
ನೂತನ ಪದಾಧಿಕಾರಿಗಳು: ರಮೆಶ್‌ ಕುಮಾರ್‌ ನಗರ ಅಧ್ಯಕ್ಷ, ವಾಟರ್‌ ಶ್ರೀನಿವಾಸ್‌ ಮತ್ತು ವಕೀಲ ಶ್ರೀನಿವಾಸ್‌ ಉಪಾದ್ಯಕ್ಷರು, ವಿಶ್ವನಾಥ್‌ ಪ್ರಧಾನ ಕಾರ್ಯದರ್ಶಿ, ಆಂಜಿನಪ್ಪ ಮತ್ತು ರಮೇಶ್‌ ಕಾರ್ಯದರ್ಶಿ, ನಗರ ಬಿ.ಜೆ.ಪಿ ಎಸ್‌.ಟಿ ಮೋರ್ಚಾ ಅಧ್ಯಕ್ಷ ಕೋಟೆ ಮಂಜುನಾಥ್, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಪದ್ಮಾವತಮ್ಮ, ಬೇಕರಿ ಶ್ರೀನಿವಾಸ್‌, ಗಣೇಶಪ್ಪ, ನಾಗರಾಜ್‌, ವಕ್ಕಲನವರ ಮುರಳಿ, ಮಲ್ಲಿಕಾರ್ಜುನ, ಪ್ರಸನ್ನಹಳ್ಳಿ ವಿಜಯಕುಮಾರ್‌, ಪ್ರಭಾಕರ್‌, ನಾಗರಾಜ್‌, ಕಸಬಾ ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮುನಿರಾಜು, ಸಂಚಾಲಕ ಮಂಜುನಾಥ್‌ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.