ADVERTISEMENT

‘ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 8:06 IST
Last Updated 14 ಡಿಸೆಂಬರ್ 2013, 8:06 IST

ವಿಜಯಪುರ:  ‘ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಶಾಲೆಗೆ ಗೌರವ ತರಬೇಕು’  ಎಂದು ಜಿ.ಪಂ. ಸದಸ್ಯ ಬಿ.ರಾಜಣ್ಣ ತಿಳಿಸಿದರು. ಸಮೀಪದ ನಲ್ಲೂರಿನ ಮಾರತಿ ಪ್ರೌಢಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದಲ್ಲಿ ಓದುವ ಮಕ್ಕಳಿಗಾಗಿ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಇದರ ಸದುಪಯೋಗ ಪಡೆದು ಕೊಳ್ಳಬೇಕು’ ಎಂದರು.

ಗ್ರಾ.ಪಂ.ಸದಸ್ಯ ಶಿವಪ್ರಸಾದ್ ಮಾತ ನಾಡಿ, ‘ಶಿಕ್ಷಣ ಮಾತ್ರ ವ್ಯಕ್ತಿ ಯನ್ನು ಮತ್ತು ಸಮಾಜವನ್ನು ಬದ ಲಾವಣೆ ಮಾಡಲು ಸಾಧ್ಯ’ ಎಂದು ತಿಳಿಸಿದರು. ತಾ.ಪಂ. ಅಧ್ಯಕ್ಷೆ ರಾಧಿಕಾ ತ್ಯಾಗ ರಾಜ್, ಗ್ರಾ.ಪಂ ಅಧ್ಯಕ್ಷೆ ಶಾರದಮ್ಮ ಮುನೇಗೌಡ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಎನ್.ಇ ಪ್ರಸಾದ್, ಜೋನ್ನಹಳ್ಳಿ ಯ ಪುಟ್ಟಣ್ಣದಾಸ, ರೆಡ್ಡಿಹಳ್ಳಿ ಕೆಂಪ ತಿಮ್ಮಣ್ಣ, ಮಲ್ಲೇನ ಹಳ್ಳಿ ನಾರಾಯಣಪ್ಪ, ಮುಖ್ಯಶಿಕ್ಷಕ ಕೃಷ್ಣಮೂರ್ತಿ ಇತರರು ಇದ್ದರು.

ಇಂದು ಹನುಮ ಜಯಂತಿ
ವಿಜಯಪುರ:
ಸಮೀಪದ ಹಳಿಯೂರು ಗ್ರಾಮದ ಸಂಜೀವರಾಯ ಸ್ವಾಮಿ ದೇವಾಲಯದಲ್ಲಿ ಶನಿವಾರ (ಡಿ.14) ಬೆಳಗ್ಗೆ 6 ಗಂಟೆಯಿಂದ ಅಶ್ವತ್ಥ ಗುರೂಜಿ ನೇತೃತ್ವದಲ್ಲಿ ಹನುಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ರಾಮಭಜನೆ, ಸಾವಿರದ ಎಂಟು ಗಾಯತ್ರಿ ಮಂತ್ರ ಜಪ, ಹೋಮ ಹವನ, ಅನ್ನಸಂರ್ಪಣೆ, ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಎಚ್‌.ಎ.ಜಯರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಗಮ ಸಂಗೀತ: ಸಮೀಪದ ಯಲಿಯೂರು ಗ್ರಾಮದಲ್ಲಿ ಶನಿವಾರ (ಡಿ.14)  ಮಧ್ಯಾಹ್ನ 2.30ಕ್ಕೆ ಬೆಂ.ಗ್ರಾ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಂಡಿಬೆಲೆ ಗ್ರಾಮದ ಸುರಭಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ  ಯಲಿಯೂರು ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸ್ಥಳೀಯ ಕಾರ್ಯಕ್ರಮ ಯೋಜನೆಯಡಿ, ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

ಶುಭ ವಿವಾಹ: ಸಮೀಪದ ಹಳಿಯೂರು ಗ್ರಾಮದ ಪದ್ಮಾವತಮ್ಮ ಮತ್ತು ಎಚ್‌.ಎನ್‌.ರಂಗೇಗೌಡ ಅವರ ಪುತ್ರ ಪ್ರತಾಪ್‌ ಮತ್ತು ಚಿಂತಾಮಣಿ ತಾಲ್ಲೂಕಿನ ಕಂದಲ ಗುರ್ಕಿ ಗ್ರಾಮದ ಲಕ್ಷ್ಮಮ್ಮ ಕೆಂಪೇಗೌಡರ ಪುತ್ರಿ  ಚೈತ್ರಾ ಅವರ ವಿವಾಹವು ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಡಿ.12ರಂದು ನೆರವೇರಿತು. ಸಚಿವ ಕೃಷ್ಣ ಭೈರೇಗೌಡ, ಜಿ.ಪಂ.ಸದಸ್ಯ ಬಿ.ರಾಜಣ್ಣ, ಬೆಂ.ಗ್ರಾ.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಬಚ್ಚೇಗೌಡ ಹಾಜರಿದ್ದು, ವಧುವರರನ್ನು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.