ADVERTISEMENT

₹ 50 ಕೋಟಿ ಬಿಡುಗಡೆ: ಶಾಸಕ ಯೋಗೇಶ್ವರ್

ಶ್ಯಾನುಭೋನಹಳ್ಳಿ, ಕಾರೆಕೊಪ್ಪ ಭಾಗದಲ್ಲಿ ಹೊಸ ಕೆರೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
₹ 50 ಕೋಟಿ ಬಿಡುಗಡೆ: ಶಾಸಕ ಯೋಗೇಶ್ವರ್
₹ 50 ಕೋಟಿ ಬಿಡುಗಡೆ: ಶಾಸಕ ಯೋಗೇಶ್ವರ್   

ಚನ್ನಪಟ್ಟಣ: ಶ್ಯಾನುಭೋನಹಳ್ಳಿ, ಕಾರೆಕೊಪ್ಪ ಭಾಗದಲ್ಲಿ ಹೊಸ ಕೆರೆ ನಿರ್ಮಾಣ ಹಾಗೂ ಏತ ನೀರಾವರಿಯ ಯೋಜನೆ ಮೂಲಕ ನೀರು ಹರಿಸಲು ಸರ್ಕಾರದಿಂದ ₹ 50 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಸೋಮವಾರ ₹15 ಕೋಟಿ ವೆಚ್ಚದಲ್ಲಿ ಬಾಗೇಪಲ್ಲಿ - ಹಲಗೂರು ರಾಜ್ಯ ಹೆದ್ದಾರಿ ಆಗಲ ಹೆಚ್ಚಿಸುವ ಕಾಮಗಾರಿಗೆ ಭೂಮಿಪೂಜೆ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಬಾಪೂಜಿ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ, ನಂತರ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಶಿಂಷಾ ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ಈ ಬಾರಿ ತಾಲ್ಲೂಕಿನ ಕೆರೆಗೆಳಿಗೆ ನೀರು ತುಂಬಿಸಲು ವಿಳಂಬವಾಗುತ್ತಿದೆ. ಮಳೆಯ ಪ್ರಮಾಣ ಜಾಸ್ತಿಯಾಗಿ ನದಿಗಳು ಭರ್ತಿಯಾದರೆ ಮತ್ತೆ ಮೋಟಾರ್ ಚಾಲನೆ ಮಾಡಿ ನೀರು ಹರಿಸಲಾಗುವುದು ಎಂದು ಯೋಗೇಶ್ವರ್ ತಿಳಿಸಿದರು.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಇಂದಿಗೂ ಸ್ಮಶಾನದ ಕೊರತೆಯಿದೆ. ಇದಕ್ಕಾಗಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸರ್ಕಾರಿ ಭೂಮಿಯ ಹುಡುಕಾಟ ನಡೆಸಿದ್ದು, ಎಲ್ಲೆಲ್ಲಿ ಸರ್ಕಾರಿ ಭೂಮಿ ಇದೆಯೋ ಅಲ್ಲಿ ಸ್ಮಶಾನಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಯೋಗೇಶ್ವರ್ ತಿಳಿಸಿದರು. ಜನಸಂಪರ್ಕ ಸಭೆಯಲ್ಲಿ ಈ ವ್ಯಾಪ್ತಿಯ ಸಾರ್ವಜನಿಕರು ತಾಲ್ಲೂಕು ಕಚೇರಿ, ನಾಡ ಕಚೇರಿ, ಬೆಸ್ಕಾಂ, ಗ್ರಾಮ ಪಂಚಾಯಿತಿಗಳಲ್ಲಿ ಆಗಬೇಕಿರುವ ವಿವಿಧ ಕಾರ್ಯಗಳ ಬಗ್ಗೆ ಶಾಸಕರಿಗೆ ಹತ್ತಾರು ಮನವಿ ನೀಡಿದರು. ವಿಧವಾ, ವೃದ್ದಾಪ್ಯ, ಅಂಗವಿಕಲ ಸೇರಿದಂತೆ ಕೆಲವು ಯೋಜನೆಗಳಿಗೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳದಲ್ಲಿಯೇ  ಅವುಗಳಿಗೆ ಪರಿಹಾರ ನೀಡಲು ಕ್ರಮ ತಗೆದುಕೊಳ್ಳಬೇಕು. ಮುಂದೆ ಕಂದಾಯ ಇಲಾಖೆಗೆ ಸೇರಿದ ಅನೇಕ ದಾಖಲೆಗಳು ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಾಗುತ್ತಿದ್ದು, ಇದಕ್ಕಾಗಿ ಬಾಪೂಜಿ ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಹಾಗಾಗಿ ಸಾರ್ವಜನಿಕರು  ಸದುಪಯೋಗ ಪಡೆದು ಕೊಳ್ಳಬೇಕು ಎಂದರು.

ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಬೆಳಗಿನ ವೇಳೆ ಮತ್ತೊಂದು ಸರ್ಕಾರಿ ಬಸ್ ಬಿಡುವಂತೆ ಮನವಿ ಮಾಡಿದರು. ಬೆಳಗಿನ ವೇಳೆ ನೂರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಹೋಗು ವುದರಿಂದ ಇರುವ ಎರಡು ಬಸ್ ಗಳಲ್ಲಿ ತೊಂದರೆಯಾಗುತ್ತಿದೆ. ಇದರಿಂದ ಕೋಡಂಬಳ್ಳಿ ಹಾಗೂ ಸುತ್ತ ಮುತ್ತಲ ವಿದ್ಯಾರ್ಥಿಗಳು ತೊಂದರೆ ಅನುಭವಿ ಸುತ್ತಿದ್ದಾರೆ ಎಂದು ವಿವರಿ ಸಿದರು. ಇದಕ್ಕೆ ಯೋಗೇಶ್ವರ್ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದೇ ವೇಳೆ ಹುಣಸನಹಳ್ಳಿ ಗ್ರಾಮದ ಬಿಸಿಲಮ್ಮ ದೇವಸ್ಥಾನದ ಆವರಣದಲ್ಲಿ ಸಂತೆ ಮೈದಾನಕ್ಕೆ ಭೂಮಿ ಪೂಜೆಯನ್ನು ನೇರವೇರಿಸಲಾಯಿತು.
ಜಿ.ಪಂ. ಅಧ್ಯಕ್ಷ ಸಿ.ಪಿ.ರಾಜೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್, ತಾ.ಪಂ.ಅಧ್ಯಕ್ಷ ಎಚ್. ರಾಜಣ್ಣ, ತಹಶೀಲ್ದಾರ್ ಕೆ.ರಮೇಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲೋಕೇಶ್, ತಾಲ್ಲೂಕು ಪಂಚಾಯ್ತಿ  ಸದಸ್ಯೆ ಸುನೀತಾ ಸಿದ್ದಪ್ಪ,  ಗ್ರಾಮ ಪಂಚಾಯ್ತಿ  ಅಧ್ಯಕ್ಷ ಶ್ವೇತ, ಉಪಾಧ್ಯಕ್ಷ ಶಿವಬೀರಯ್ಯ, ಮುಖಂಡ ರಾದ ಸಿದ್ದರಾಮು, ಕೃಷ್ಣಪ್ಪ, ಕೊಂಡಾಪುರ ಪುಟ್ಟೇಗೌಡ, ಸತೀಶ್, ಶಿವಲಿಂಗಯ್ಯ, ಶೇಖರ್, ದಿನೇಶ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.