ADVERTISEMENT

ಸೂಲಿಬೆಲೆ | ಹೆಚ್ಚುತ್ತಿರುವ ಕುರಿಗಳ ಸಾವಿನ ಸಂಖ್ಯೆ

ಚಿರತೆ ದಾಳಿಯೇ ಎಂದು ಸ್ಪಷ್ಟತೆ ನೀಡದ ಅರಣ್ಯ ಅಧಿಕಾರಿಗಳು  

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:03 IST
Last Updated 28 ಜನವರಿ 2026, 6:03 IST
ಅತ್ತಿಬೆಲೆ ಗ್ರಾಮದಲ್ಲಿ ಪತ್ತೆಯಾಗದ ಪ್ರಾಣಿಯಿಂದ ದಾಳಿಗೆ ಒಳಗಾದ ಕುರಿಗಳಸ್ಥಳ ಮಹಜರು ನಡೆಸಿದ ಅರಣ್ಯ ಅಧಿಕಾರಿಗಳು
ಅತ್ತಿಬೆಲೆ ಗ್ರಾಮದಲ್ಲಿ ಪತ್ತೆಯಾಗದ ಪ್ರಾಣಿಯಿಂದ ದಾಳಿಗೆ ಒಳಗಾದ ಕುರಿಗಳಸ್ಥಳ ಮಹಜರು ನಡೆಸಿದ ಅರಣ್ಯ ಅಧಿಕಾರಿಗಳು   

ಸೂಲಿಬೆಲೆ (ಹೊಸಕೋಟೆ): ಕಳೆದ 15 ದಿನಗಳಿಂದ ಹೊಸಕೋಟೆ ತಾಲ್ಲೂಕಿನ ಕಂಬಳಿಪುರ, ಬೇಗೂರು, ಡಿ.ಶೆಟ್ಟಹಳ್ಳಿ, ಅತ್ತಿಬೆಲೆ ಸುತ್ತಮುತ್ತಲಿನ ಗ್ರಾಮಗಳ ಬಳಿ ಚಿರತೆ ಓಡಾಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳು ಹರಿದಾಡುತ್ತಿದ್ದರೂ ಇದು ನಕಲಿಯೋ ಅಥವಾ ಚಿರತೆ ಓಡಾಟ ದೃಶ್ಯಗಳು ನೈಜವೊ ಎಂಬುದರ ಸ್ಪಷ್ಟತೆ ನೀಡುವಲ್ಲಿ ಅರಣ್ಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ಅತ್ತಿಬೆಲೆ ಗ್ರಾಮದಲ್ಲಿ ಭಾನುವಾರ ರಾತ್ರಿ ಸುಮಾರು 14 ಕುರಿ, ಸೋಮವಾರ ರಾತ್ರಿ ಐದಾರು ಕುರಿಗಳ ಮೇಲೆ ನಾಯಿಯೊ ಅಥವಾ ಚಿರತೆಯೋ ದಾಳಿ ಮಾಡಿ ರೈತ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದೆ.

ಕುರಿಗಳ ಮೇಲೆ ನಾಯಿ ದಾಳಿ ಮಾಡಿದೆಯೋ ಅಥವಾ ಚಿರತೆ ದಾಳಿ ಮಾಡಿದೆಯೋ ನೋಡಿಲ್ಲ. ಆದರೆ ಯಾವ ಪ್ರಾಣಿ ದಾಳಿ ಮಾಡಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟತೆ ನೀಡಿದರೆ ನೆಮ್ಮದಿಯಿಂದ ಓಡಾಡಲು ಸಾಧ್ಯ ಎಂದು ಗ್ರಾಮಸ್ಥರಲ್ಲಿ ಹೇಳಿದರು.

ADVERTISEMENT

ಕುರಿ ಮಾಲೀಕ ಶಿವಕುಮಾರ್ ಮಾತನಾಡಿ, ಸೋಮವಾರ ರಾತ್ರಿ ಕುರಿಗಳ ಮೈಮೇಲೆ ರಕ್ತ ಸೋರುತ್ತಿತ್ತು. ನಾಯಿಗಳು ಏನಾದರೂ ಮಾಡಿರಬಹುದು ಎಂದು ಸುಮ್ಮನಿದ್ದೆ. ಮಂಗಳವಾರ ಮುಂಜಾನೆ ಪಕ್ಕದ ಮನೆಯ ಬಳಿ 4 ಕುರಿಗಳನ್ನು ಸಾಯಿಸಿದೆ. ಈ ಕುರಿಗಳ ಸುತ್ತಲೂ 8 ಅಡಿ ಎತ್ತರದ ಗೋಡೆ ಇದೆ. ನಾಯಿ ಅಂತೂ ಅಷ್ಟು ಎತ್ತರದ ಗೋಡೆ ಹಾರಲು ಸಾಧ್ಯವಿಲ್ಲ. ಕುರಿಗಳ ಕರುಳು ಹೊರಬರುವಂತೆ ಮತ್ತು ಕುರಿಗಳ ತಲೆ ಭಾಗದಲ್ಲಿ ಕಚ್ಚಿರುವ ಗುರುತು ಗಮನಿಸಿದರೆ ಕಾಡುಪ್ರಾಣಿಯೇ ಇರಬಹುದು ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಆತಂಕಕ್ಕೆ ಕಾರಣವಾದ ಪ್ರಾಣಿ ಯಾವುದು ಎಂಬುದನ್ನು ಪತ್ತೆ ಹಚ್ಚಿ ಸೆರೆಹಿಡಿಯುವ ಕೆಲಸ ಮಾಡಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಮಧ್ಯರಾತ್ರಿ ಕರೆಂಟ್ ಬಂದರೆ ಹೊಲಕ್ಕೆ ಒಬ್ಬರೇ ಹೋಗುತ್ತಿದ್ದೆವು. ಈಗ ಚಿರತೆ ಇದೆ ಎಂಬ ಭಯ ಹುಟ್ಟಿದರೆ ಹೇಗೆ ಓಡಾಡಬೇಕು. ಮನೆಯಿಂದ ಹೊರಬರಲು ಹೆದರುವ ಸ್ಥಿತಿ ಇದೆ ಎಂದು ಅತ್ತಿಬೆಲೆ ಗ್ರಾಮದ ನಿವಾಸಿ ಸುಬ್ರಮಣಿ ಹೇಳಿದರು. 

ಎರಡು ಮೂರು ದಿನಗಳಿಂದ 25ಕ್ಕೂ ಹೆಚ್ಚು ಕುರಿಗಳ ಮೇಲೆ ಯಾವ ಪ್ರಾಣಿಯೋ ದಾಳಿ ಮಾಡಿದೆ. ಬಹುತೇಕ ಕುರಿಗಳು ಸಾವನ್ನಪ್ಪಿವೆ. ಕರಳು ಹೊರಬರುವಂತೆ ಕಚ್ಚಿದೆ. ನಾಯಿಯಂತೂ ಆಗಿರಲು ಸಾಧ್ಯವಿಲ್ಲ ಎಂದು ಅತ್ತಿಬೆಲೆ ಗ್ರಾಮಸ್ಥ ನಾಗೇಶ್ ಹೇಳಿದರು. 

ರೈತರ 25ಕ್ಕೂ ಹೆಚ್ಚು ಕುರಿಗಳ ಸಾವನ್ನಪ್ಪಿದೆ. ₹2 ಲಕ್ಷಕ್ಕೂ ಹೆಚ್ಚು ನಷ್ಟವನ್ನುಂಟು ಮಾಡಿದೆ ಎಂದು ಅತ್ತಿಬೆಲೆ ಗ್ರಾಮಸ್ಥ ಕುಮಾರ್ ತಿಳಿಸಿದರು.

ಅತ್ತಿಬೆಲೆ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕುರಿಗಳ ಮೇಲೆ ದಾಳಿ ಆಗುತ್ತಿರುವುದನ್ನು ಅರಣ್ಯ ಅಧಿಕಾರಿಗಳು ಪರಿಶೀಲಿಸುತ್ತಿರುವುದು
ಅತ್ತಿಬೆಲೆ ಗ್ರಾಮದಲ್ಲಿ ಕುರಿಗಳ ಸಾವಿಗೆ ಕಾರಣ ಏನು ಎಂಬುದನ್ನು ಅರಣ್ಯ ಅಧಿಕಾರಿಗಳು ಸ್ಥಳ ಮಹಜರು ಮಾಡುತ್ತಿರುವ ಸಂದರ್ಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.