ADVERTISEMENT

ಬೆಂ.ಗ್ರಾ ಜಿಲ್ಲೆಯಲ್ಲಿ ಶೇ 87.30ರಷ್ಟು ಸಮೀಕ್ಷೆ

ಅಕ್ಟೋಬರ್‌ 31ರವರೆಗೂ ಸಮೀಕ್ಷೆ ನಡೆಯಲಿದೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 8:07 IST
Last Updated 22 ಅಕ್ಟೋಬರ್ 2025, 8:07 IST
ಎ.ಬಿ.ಬಸವರಾಜು
ಎ.ಬಿ.ಬಸವರಾಜು   

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶೇ87.30ರಷ್ಟು ಮುಕ್ತಾಯವಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೂರು ದಿನಗಳ ಬಿಡುವು ನೀಡಲಾಗಿದೆ. ಅಕ್ಟೋಬರ್‌ 31ರವರೆಗೂ ಸಮೀಕ್ಷೆ ನಡೆಯಲಿದೆ. ಆದರೆ, ಸಮೀಕ್ಷೆ ಕೆಲಸದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸಲಾಗಿದ್ದು ಅಕ್ಟೋಬರ್‌ 21ರಿಂದ ಶಾಲೆಗಳಲ್ಲಿ ತರಗತಿಗಳು ಪ್ರಾರಂಭವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿ, ಸಮೀಕ್ಷೆ ಕೆಲಸದಲ್ಲಿ ಶಿಕ್ಷಕರು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಿದ್ದಾರೆ. ಇನ್ನೂ ಬಾಕಿ ಉಳಿದಿರುವ ಸಮೀಕ್ಷೆ ಕೆಲಸವನ್ನು ಶಿಕ್ಷಣ ಇಲಾಖೆಯ ಬಿಆರ್‌ಸಿ, ಸಿಆರ್‌ಸಿ ಹಾಗೂ ಇಸಿಒ ಮತ್ತು ನಗರಸಭೆ ಸಿಬ್ಬಂದಿಯನ್ನು ಬಳಸಿಕೊಂಡು ಪೂರ್ಣಗೊಳಿಸಲಾಗುವುದು. ವಾಣಿಜ್ಯ ಮಳಿಗೆ, ಹಾಸ್ಟೆಲ್‌ ಹಾಗೂ ಜನವಸತಿ ಇಲ್ಲದ ಇತರೆ ಮನೆಗಳನ್ನು ಸಮೀಕ್ಷೆ ಪಟ್ಟಿಯಿಂದ ತೆಗೆಯಲಾಗಿದೆ ಎಂದರು.

ತಾಲ್ಲೂಕುವಾರು ಸಮೀಕ್ಷೆಯಲ್ಲಿ ಹೊಸಕೋಟೆ ತಾಲ್ಲೂಕು ಶೇ95.68ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದರೆ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶೇ79.37ರಷ್ಟು ಸಮೀಕ್ಷೆ ಪೂರ್ಣಗೊಳ್ಳುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ ಎಂದರು.

ADVERTISEMENT

ತಾಲ್ಲೂಕು ವಾರು ಸಮೀಕ್ಷೆ ಅಂಕಿ ಅಂಶ

ದೇವನಹಳ್ಳಿ; ಶೇ83.08

ದೊಡ್ಡಬಳ್ಳಾಪುರ; ಶೇ79.37

ಹೊಸಕೋಟೆ; ಶೇ95.68

ನೆಲಮಂಗಲ; ಶೇ92.03

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.