ADVERTISEMENT

ಮತದಾರರಿಗೆ ಆ್ಯಪ್ ನೆರವು: ಚುನಾವಣೆ ಶಿರಸ್ತೇದಾರ್ ಚೈತ್ರಾ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 5:18 IST
Last Updated 15 ನವೆಂಬರ್ 2021, 5:18 IST
ವಿಜಯಪುರ ಪಟ್ಟಣದ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಚುನಾವಣೆ ಶಿರಸ್ತೆದಾರ್ ಚೈತ್ರಾ ಅವರು ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ವೋಟರ್ ಹೆಲ್ಪ್ ಲೈನ್ ಆ್ಯಪ್ ಕುರಿತು ಯುವಮತದಾರರಿಗೆ ಜಾಗೃತಿ ಮೂಡಿಸಿದರು.
ವಿಜಯಪುರ ಪಟ್ಟಣದ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಚುನಾವಣೆ ಶಿರಸ್ತೆದಾರ್ ಚೈತ್ರಾ ಅವರು ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ವೋಟರ್ ಹೆಲ್ಪ್ ಲೈನ್ ಆ್ಯಪ್ ಕುರಿತು ಯುವಮತದಾರರಿಗೆ ಜಾಗೃತಿ ಮೂಡಿಸಿದರು.   

ವಿಜಯಪುರ: ಇನ್ನು ಮುಂದೆ ಮತದಾರರ ಪಟ್ಟಿಯಲ್ಲಿ ಹೆಸರು ತಿದ್ದುಪಡಿಗಾಗಿ ಜನರು ಕೆಲಸ ಬಿಟ್ಟು ಯಾವುದೇ ಸರ್ಕಾರಿ ಕಚೇರಿಯಲ್ಲಿ ಸಾಲುಗಟ್ಟಿ ನಿಲ್ಲಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ಚುನಾವಣೆ ಶಿರಸ್ತೇದಾರ್ ಚೈತ್ರಾ ಹೇಳಿದರು.

ಪಟ್ಟಣದ ಪುರಸಭೆಯ ಆವರಣದಲ್ಲಿ ಭಾನುವಾರ ಚುನಾವಣೆ ಆಯೋಗ ಹಾಗೂ ವಿಜಯಪುರ ಪುರಸಭೆಯ ಸಹಯೋಗದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಕಾರ್ಯಕ್ರಮ ಹಾಗೂ ವೋಟರ್ ಹೆಲ್ಪ್ ಆ್ಯಪ್ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು.

ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ಶ್ರೀಕಂಠಯ್ಯ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮದಲ್ಲಿ ನ. 21, 28ರ ಭಾನುವಾರದಂದು ವಿಶೇಷ ಆಂದೋಲನದ ಮಾದರಿಯಲ್ಲಿ ಯುವ ಮತದಾರರ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇತ್ತು. ಈಗ ಆ್ಯಪ್ ಮೂಲಕ ಸೇರ್ಪಡೆ,
ತಿದ್ದುಪಡಿಗಳಿಗೆ ಅವಕಾಶ ನೀಡಲಾಗಿದೆ ಎಂದು
ಹೇಳಿದರು.

ADVERTISEMENT

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿ.ಎಲ್.ಓಗಳೊಂದಿಗೆ ಮೆರವಣಿಗೆ ನಡೆಸಿ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಕುರಿತು ಜಾಗೃತಿ ಮೂಡಿಸಲಾಯಿತು. ಯುವ ಮತದಾರರು ಆ್ಯಪ್‌ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೊಂಡರು.

ಪುರಸಭೆ ವ್ಯವಸ್ಥಾಪಕ ಆಂಜನೇಯುಲು, ಉಪ ತಹಶೀಲ್ದಾರ್ ಲವಕುಮಾರ್, ರಾಜಸ್ವ ನಿರೀಕ್ಷಕ ರಾಜು ಸಬಾಸ್ಟಿನ್, ಕೋರಮಂಗಲ ಗ್ರಾಮ ಲೆಕ್ಕಾಧಿಕಾರಿ ಸಿ.ವೈ. ಕುಮಾರ, ಪುರಸಭಾ ಸಿಬ್ಬಂದಿ ಗೋಪಾಲ್, ಆರ್.ಸುನೀಲ್, ಲಕ್ಷ್ಮೀನಾರಾಯಣ, ತಾಲ್ಲೂಕು ಪಂಚಾಯಿತಿಯ ಪ್ರಕಾಶ್.ಸಿ.ಎಂ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.