ADVERTISEMENT

ಯಲಹಂಕ: ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 16:15 IST
Last Updated 7 ಡಿಸೆಂಬರ್ 2025, 16:15 IST
<div class="paragraphs"><p>ಎ.ಸಿ.ಗೌರಮ್ಮ ಕೃಷ್ಣಪ್ಪ</p></div>

ಎ.ಸಿ.ಗೌರಮ್ಮ ಕೃಷ್ಣಪ್ಪ

   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.

ಆರ್‌.ಬೈರೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕಾಗಿ ಉಪಾಧ್ಯಕ್ಷರಾಗಿದ್ದ ಗೌರಮ್ಮ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಒಟ್ಟು 14 ಸದಸ್ಯರನ್ನು ಪಂಚಾಯಿತಿ ಹೊಂದಿದೆ.

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎನ್.ಕೆ.ಮಹೇಶ್‌ಕುಮಾರ್‌, ಹಂಸವೇಣಿ ಮಂಜುನಾಥ್‌, ಸದಸ್ಯರಾದ ಎಂ.ಚೇತನ್‌, ನಾಗರಾಜು.ಎ, ಹರಿಪ್ರಕಾಶ್‌, ಪ್ರಕಾಶ್‌, ನರಸಿಂಹಯ್ಯ, ಸೌಭಾಗ್ಯಮ್ಮ, ರತ್ನಮ್ಮ, ಮಾಲಾ, ಶ್ರುತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.