
ಶಿವನಾಪುರ (ಹೊಸಕೋಟೆ): ಗ್ರಾಮದ ವಹ್ನಿಕುಲ ತಿಗಳ ಸಮುದಾಯದ ಆದಿ ಶಕ್ತಿ ಮಹಾಸಂಸ್ಥಾನ ಮಠವನ್ನು ಆರ್ಥಿಕವಾಗಿ ಮೇಲೆತ್ತುವ ದೃಷ್ಠಿಯಿಂದ ಮಠದ ಅಭಿವೃದ್ಧಿ ಸಮಿತಿ ಹಾಗೂ ಟ್ರಸ್ಟಿಗಳ ಜಂಟಿ ಸಭೆ ನಡೆಯಿತು.
ತಾಲ್ಲೂಕಿನ ನಂದಗುಡಿ ಹೋಬಳಿಯ ಶಿವನಾಪುರ ಗ್ರಾಮದಲ್ಲಿ ಪ್ರಣಾವನಂದಪುರಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆ ಸಭೆಯಲ್ಲಿ ಮಠದ ಅಭಿವೃದ್ಧಿ, ಮಠದಲ್ಲಿರುವ ಸಮುದಾಯ ಭವನ, ವಿದ್ಯಾರ್ಥಿ ನಿಲಯ, ಗೋಶಾಲೆಗಳ ಅಭಿವೃದ್ಧಿ ಮತ್ತು ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಆರ್ಥಿಕವಾಗಿ ಸದೃಢಗೊಳ್ಳಬೇಕಿದೆ. ಹೀಗಾಗಿ ಸಮುದಾಯದ ಉದ್ಯಮಿ, ಸ್ಥಿತಿವಂತರು ದೇಣಿಗೆ ನೀಡಲು ಮುಂದೆ ಬರಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ವಾರ್ಷಿಕ ದೇಣಿಗೆಯ ಪ್ರಮಾಣ ₹1 ಕೋಟಿವರೆಗೂ ಸಂಗ್ರಹಿಸಲು ಎಲ್ಲರ ಪಾಲ್ಗೊಳ್ಳುವಿಕೆ ಹಾಗೂ ಪ್ರಚಾರ ಮುಖ್ಯ ಎಂದು ಚರ್ಚಿಸಲಾಯಿತು.
ಇದೆ ಸಂದರ್ಭದಲ್ಲಿ ಸಿ.ಜಯರಾಜ್ ಪ್ರತಿ ವರ್ಷ ₹2 ಲಕ್ಷ, ಜಿ.ರಾಜಣ್ಣ ₹1ಲಕ್ಷ, ದೇವನಹಳ್ಳಿ ವಿಜಯ್ ಕುಮಾರ್ ₹1 ಲಕ್ಷ, ನಾಗವಾರಪಾಳ್ಯ ಶಿವರಾಜ್ ₹60 ಸಾವಿರ, ಜಂಗಮಕೋಟೆ ಧರ್ಮರಾಯಸ್ವಾಮಿ ಟ್ರಸ್ಟ್ ವತಿಯಿಂದ ₹50 ಸಾವಿರ ದೇಣಿಗೆ ನೀಡುವುದಾಗಿ ಘೋಷಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.