ADVERTISEMENT

ರಾಮನಗರ ಜಿಲ್ಲೆ ಮರುನಾಮಕರಣ: ಸಂಸದ ಮಂಜುನಾಥ್ ವಿರೋಧ

ಇಂಥ ಸೊಗಸಾದ ಹೆಸರು ಎಲ್ಲಿ ಹುಡುಕಿದರೂ ಸಿಗಲ್ಲ; ಅದನ್ನು ಏಕೆ ಬದಲಿಸಬೇಕು?

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 17:24 IST
Last Updated 21 ಜುಲೈ 2024, 17:24 IST

ಆನೇಕಲ್‌: ಅಭಿವೃದ್ಧಿ ನೆಪದಲ್ಲಿ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಪ್ರಸ್ತಾಪವನ್ನು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್‌ ವಿರೋಧಿಸಿದ್ದಾರೆ. 

‘ಯಾವುದಾದರೂ ವ್ಯಕ್ತಿಯ ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಆತನ ವ್ಯಕ್ತಿತ್ವ ಮತ್ತು ಚಾರಿತ್ರ್ಯಬದಲಾಗುತ್ತದೆಯೇ’ ಎಂದು ಅವರು ಪ್ರಶ್ನಿಸುವ ಮೂಲಕ ಮರು ನಾಮಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಬದಲು ರಾಮನಗರವನ್ನೇ ಬ್ರ್ಯಾಂಡ್‌  ಮಾಡಬೇಕು ಎಂದು ತಾಲ್ಲೂಕಿನ ಮರಸೂರು ಗೇಟ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಲಹೆ ಮಾಡಿದ್ದಾರೆ.

ADVERTISEMENT

ರಾಮನಗರ ಎಂಬ ಸೊಗಸಾದ ಹೆಸರು ಬದಲಿಸುವ ನಿರ್ಧಾರ ಕೈಬಿಟ್ಟು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಮೂಲಕ ಬ್ರ್ಯಾಂಡ್‌ ರಾಮನಗರವನ್ನಾಗಿ ಮಾಡಬೇಕು. ಎಲ್ಲೇ ಹುಡುಕಿದರೂ ರಾಮನಗರ ಎಂಬ ಸೊಗಸಾದ ಹೆಸರು ದೊರೆಯುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.