
ಆನೇಕಲ್: ಪಟ್ಟಣದಲ್ಲಿ ಬಿಎಸ್‌ಪಿ ಆನೇಕಲ್ ವಿಧಾನಸಭಾ ಕ್ಷೇತ್ರ ಘಟಕದಿಂದ ‘ಒಂದು ವೋಟು ಕೊಡಿ ಒಂದು ನೋಟು ಕೊಡಿ’ ಅಭಿಯಾನದ ಮೂಲಕ ಪಕ್ಷದ ಸಂಘಟನೆಗೆ ಚಾಲನೆ ನೀಡಲಾಯಿತು.
ಬಿಎಸ್‌ಪಿ ಆನೇಕಲ್ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕೆ.ಯಲ್ಲಪ್ಪ ಮಾತನಾಡಿ, ‘ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜನತಾದಳ ಮೂರು ಪಕ್ಷಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ಈ ಬಾರಿ ಬಿಎಸ್‌ಪಿಗೆ ಉತ್ತಮ ವಾತಾವರಣವಿದ್ದು ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಲು ಒಂದು ವೋಟು ಕೊಡಿ ಒಂದು ನೋಟು ಕೊಡಿ ಅಭಿಯಾನ ಆಯೋಜಿಸಲಾಗಿದೆ’ ಎಂದರು.
ಪಕ್ಷ ಸಂಘಟಿಸಲು ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಹೆಚ್ಚಿದೆ. ಬಡವರ ಪಕ್ಷವಾಗಿದ್ದು ಜನರಿಂದ ಒಂದು ವೋಟು ಮತ್ತು ಒಂದು ನೋಟು ಪಡೆದು ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಲಾಗುವುದು. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಸಭೆ ಸೇರಿದಂತೆ ವಿವಿಧ ಸಂಘಟನಾತ್ಮಕ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.