ಬಂಧನ
(ಪ್ರಾತಿನಿಧಿಕ ಚಿತ್ರ)
ಆನೇಕಲ್: ಇತ್ತೀಚಿಗೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕ ದರ್ಶನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸ್ನೇಹಿತ ಜಯಸೂರ್ಯ ಅಲಿಯಾಸ್ ಕೆಂಚನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಗಿರೀಶ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಜುಲೈ 14ರಂದು ಆಟೊ ಚಾಲಕ ದರ್ಶನ್ ಕೊಲೆಯಾಗಿತ್ತು. ಆಟೊ ನಿಲ್ದಾಣದಲ್ಲಿ ದರ್ಶನ್‌ಗೆ ಜಯಸೂರ್ಯ ಮತ್ತು ಗಿರೀಶ್ ಪರಿಚಯವಾಗಿತ್ತು. ತಮಾಷೆಗಾಗಿ ಜಯಸೂರ್ಯ ಅಲಿಯಾಸ್ ಕೆಂಚ ಮತ್ತು ಗಿರೀಶ್ ಅಲಿಯಾಸ್ ಕರಿಯ ದರ್ಶನ್‌ನ ತಲೆಗೆ ಹೊಡೆದರು. ಈ ಸಂದರ್ಭದಲ್ಲಿ ದರ್ಶನ್ ಜಯಸೂರ್ಯನ ಕಪಾಳಕ್ಕೆ ಹೊಡೆದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಮಾತು ವಿಕೋಪಕ್ಕೆ ತಿರುಗಿ ದರ್ಶನ್ ಕೊಲೆಯಲ್ಲಿ ಜಗಳ ಅಂತ್ಯವಾಗಿತು.
ಬಂಧಿತರನ್ನು ಹೆಬ್ಬಗೋಡಿ ಪೊಲೀಸ್ ಇನ್‌ಸ್ಪೆಕ್ಟರ್ ಸೋಮಶೇಖರ್ ಘಟನಾ ಸ್ಥಳದಲ್ಲಿ ಮಹಜರು ಮಾಡಿ ಬಂಧಿತರಿಂದ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.