ಸಾವು (ಪ್ರಾತಿನಿಧಿಕ ಚಿತ್ರ)
ಆನೇಕಲ್: ಪತ್ನಿಯ ಶೀಲ ಶಂಕಿಸಿ ಆಕೆಯ ಕತ್ತು ಹಿಸುಕಿ ಕೊಂದು, ವಾಟರ್‌ಹೀಟರ್‌ನ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ್ದ ಪತಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿಕಾರಿಪಾಳ್ಯದ ಓಂಶಕ್ತಿ ಬಡಾವಣೆಯ ರೇಷ್ಮಾ (32) ಮೃತರು. ಈಕೆಯ ಪ್ರಶಾಂತ್ ಬಂಧಿತ.
ರೇಷ್ಮಾ ಅವರ ಮೊದಲ ಪತಿ ಮೃತಪಟ್ಟ ಬಳಿಕ 15 ವರ್ಷದಿಂದ ಮಗಳೊಂದಿಗೆ ವಾಸವಿದ್ದರು. ರೇಷ್ಮಾ ಅವರಿಗೆ ಒಂಬತ್ತು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ಪರಿಚಯವಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ಮದುವೆಯಾಗಿದ್ದರು. ಇಬ್ಬರು ಹೊಸ ಜೀವನ ಆರಂಭಿಸಿದ್ದರು. ಆದರೆ ಕೆಲ ದಿನಗಳಿಂದ ಪತ್ನಿ ಶೀಲ ಶಂಕಿಸಿ ಪ್ರಶಾಂತ್ ಜಗಳ ಆರಂಭಿಸಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಆಗ್ಗಾಗೆ ಜಗಳ ನಡೆಯುತ್ತಿತು.
ಶನಿವಾರ ಇದೇ ವಿಚಾರವಾಗಿ ಜಗಳ ಆರಂಭಿಸಿದ ಪ್ರಶಾಂತ್ ರೇಷ್ಮಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ. ಮೃತ ದೇಹವನ್ನು ಸ್ನಾನದ ಮನೆಯಲ್ಲಿ ಇರಿಸಿ, ಆಚೆ ಬಾಗಿಲು ಹಾಕಿಕೊಂಡು ಹೋಗಿದ್ದ. ಮೃತ ರೇಷ್ಮಾ ಅವರ ಪುತ್ರಿ ಮನೆಗೆ ಬಂದು ಸ್ನಾನದ ಮನೆ ಬಾಗಿಲು ತಾಯಿಯು ಅಸ್ವಸ್ಥಗೊಂಡಿದದರು. ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿರುವುದಾಗಿ ಘೋಷಣೆ ಮಾಡಿದರು ಎಂದು ಪೊಲೀಸರು ತಿಳಿಸಿದರು.
ತನ್ನ ಪತ್ನಿ ವಾಟರ್ ಹೀಟರ್ ಸ್ವೀಚ್ ಹಾಕುವ ವೇಳೆ ಮೃತಪಟ್ಟಿದ್ದಾಳೆ ಆರೋಪಿಯೂ ಸುಳ್ಳು ಹೇಳಿದ್ದ. ಆದರೆ ಆತ ಸ್ನಾನದ ಮನೆ ಬಾಗಿಲನ್ನು ಹೊರಗಡೆಯಿಂದ ಲಾಕ್ ಮಾಡಿಕೊಂಡಿ ಹೋಗಿದ್ದವರ ಕುರಿತು ಪುತ್ರಿ ಪೊಲೀಸರಿಗೆ ತಿಳಿಸಿದ್ದರು. ಇದನ್ನು ಆಧಾರಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ.
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.