ADVERTISEMENT

ಆನೇಕಲ್: ಓಂಶಕ್ತಿ ದೇಗುಲದಲ್ಲಿ ಮಂಡಲ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 1:58 IST
Last Updated 13 ಡಿಸೆಂಬರ್ 2025, 1:58 IST
ಮಂಡಲ ಪೂಜೆಯ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ
ಮಂಡಲ ಪೂಜೆಯ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ   

ಆನೇಕಲ್: ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಓಂ ಶಕ್ತಿ ದೇವಾಲಯದಲ್ಲಿ ಮಂಡಲ ಪೂಜೆ ಶ್ರದ್ಧಾ,ಭಕ್ತಿಯಿಂದ ಶುಕ್ರವಾರ ನೆರವೇರಿತು. ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮಂಡಲ ಪೂಜೆ ಪ್ರಯುಕ್ತ ದೇವಾಲಯದಲ್ಲಿ ಶಾಂತಿ ಹೋಮ ಆಯೋಜಿಸಲಾಗಿತ್ತು. ದೇವಿಗೆ ಅಭಿಷೇಕ ಕಲಶ ಅಭಿಷೇಕ ವಿಶೇಷ ಅಲಂಕಾರ ಮಾಡಲಾಗಿತ್ತು. ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಓಂ ಶಕ್ತಿ ದೇವಾಲಯದಲ್ಲಿ ಮಂಡಲ ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರು

ಧಾರ್ಮಿಕ ಕಾರ್ಯಕ್ರಮಗಳಿಂದ ಗ್ರಾಮಗಳಲ್ಲಿ ಒಗ್ಗಟ್ಟು ಮೂಡುತ್ತದೆ. ಗ್ರಾಮದ ಮಹಿಳೆಯರು ಸಾಮರಸ್ಯದಿಂದ ಜೀವನ ನಡೆಸಲು ಧಾರ್ಮಿಕ ಕಾರ್ಯಕ್ರಮಗಳು ಉಪಯುಕ್ತವಾಗಿದೆ. ಮಹಿಳೆಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ದೇವಾಲಯದ ರಾಧಾ ನಾಗರಾಜ ರೆಡ್ಡಿ ತಿಳಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಜಾತ, ದೇವಾಲಯದ ಚಿನ್ನಪ್ಪ, ನಾಗರತ್ನಮ್ಮ, ಕಾಂತರಾಜು, ರೇಣುಕಾ, ಶಿವರಾಂ, ಅಣ್ಣಯ್ಯ, ಯಲ್ಲಮ್ಮ, ತಬಲಾ ಶ್ರೀನಿವಾಸ್, ಬಸಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.