
ಆನೇಕಲ್: ಪಟ್ಟಣದಲ್ಲಿ ಜೈಭೀಮ್ ಜಾಗೃತಿ ವೇದಿಕೆ ಸಂಘಟನೆಯನ್ನು ಶಾಸಕ ಬಿ.ಶಿವಣ್ಣ, ದಲಿತ ಪರ ಹೋರಾಟಗಾರರಾದ ಬಿ.ಗೋಪಾಲ್ ಮತ್ತು ವೆಂಕಟಸ್ವಾಮಿ ಉದ್ಘಾಟಿಸಿದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಸಂಘಟನೆಗಳ ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಹಕ್ಕುಗಳ ಸಂರಕ್ಷಣೆಗಿರುವ ಅಸ್ತ್ರವಾಗಿದೆ. ಹಾಗಾಗಿ ಸಂಘಟನೆಗಳು ಕ್ರಿಯಾಶೀಲ ಚಟುವಟಿಕೆ ನಡೆಸುವ ಮೂಲಕ ಸಮಾಜದಲ್ಲಿನ ಅಂಕು–ಡೊಂಕು ತಿದ್ದಬೇಕು. ಅಂಬೇಡ್ಕರ್ ವಿಚಾರಧಾರೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಘಟನೆಗಳು ಶ್ರಮಿಸಬೇಕು ಎಂದರು.
ಜೈಭೀಮ್ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮುರುಗೇಶ್ ಮಾತನಾಡಿ, ತಾಲ್ಲೂಕಿನಲ್ಲಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಮತ್ತು ಸಮಾಜದಲ್ಲಿ ಹಿಂದುಳಿದವರನ್ನು ಮುನ್ನೆಲೆಗೆ ತರಬೇಕೆಂಬ ನಿಟ್ಟಿನಲ್ಲಿ ಜೈಭೀಮ್ ಜಾಗೃತಿ ವೇದಿಕೆ ರಚಿಸಲಾಗಿದೆ ಎಂದರು.
ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಡಿ.ಮುನಿಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಟಿ.ಡಿ.ರಮೇಶ್, ಉಪಾಧ್ಯಕ್ಷ ದೇವರಾಜು, ಪದಾಧಿಕಾರಿಗಳಾದ ಸುರೇಶ್, ಯಲ್ಲಪ್ಪ, ಮಂಜುನಾಥ್, ಮುನಿರತ್ನ, ಸಿ.ಕೆ.ಪಾಳ್ಯ ಮುನಿ, ಮುಖಂಡರಾದ ಅಂಬರೀಷ್, ದೇವರಾಜ್, ರಾಜೇಂದ್ರ, ಯಶೋಧಾ, ಶೋಭಾ, ಮಾರಕ್ಕ, ಸೂರ್ಯಕುಮಾರಿ, ವೇಧಾವತಿ, ವಿನೋದ್, ಅಂಬರೀಷ್, ಸುರೇಶ್, ಸತೀಶ್ ಸಶಿಕುಮಾರ್, ನಂಜುಂಡ, ರಾಜೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.