ADVERTISEMENT

ಮಾಲ್ಗುಡಿ ಎಕ್ಸ್‌ಪ್ರೆಸ್‌: ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 11:35 IST
Last Updated 2 ಜನವರಿ 2020, 11:35 IST
   

ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಂದ ಕಾನೂನುಬಾಹಿರವಾಗಿ ಸೂಪರ್ ಫಾಸ್ಟ್ ಸರ್ಚ್ ಚಾರ್ಜ್ ಸಂಗ್ರಹಿಸುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

"ರೈಲ್ವೇ ಇಲಾಖೆ ಸುತ್ತೋಲೆ ಅನ್ವಯ ಸೂಪರ್ ಫಾಸ್ಟ್ ರೈಲು ಗಂಟೆಗೆ 55 ಕಿ.ಮೀ ಪ್ರಯಾಣಿಸಬೇಕು. ಆದರೆ, ರೈಲ್ವೇ ಇಲಾಖೆ ನೀಡಿರುವ ಮಾಹಿತಿ ಅನ್ವಯ 45 ಕಿ.ಮೀ ಮಾತ್ರ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಸಂಚರಿಸುತ್ತಿದೆ. ಹೀಗಾಗಿ ಆ ರೈಲಿನ ಪ್ರಯಾಣಿಕರಿಂದ ಸೂಪರ್ ಫಾಸ್ಟ್ ಸರ್ಚ್ ಚಾರ್ಜ್ ಅನ್ನು ಸಂಗ್ರಹಿಸುವುದು ತಪ್ಪು. ಆದ್ದರಿಂದ ಸೂಪರ್ ಫಾಸ್ಟ್ ಸರ್ಚ್ ಚಾರ್ಜ್ ಅನ್ನು ಸಂಗ್ರಹಿಸದಂತೆ ರೈಲ್ವೇ ಇಲಾಖೆಗೆ ನಿರ್ದೇಶಿಸಬೇಕು" ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT