ADVERTISEMENT

ಸಣ್ಣ ವ್ಯಾಪಾರಿಗಳ ಅಭಿವೃದ್ಧಿಗೆ ನೆರವು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 4:43 IST
Last Updated 28 ನವೆಂಬರ್ 2022, 4:43 IST
ಹೊಸಕೋಟೆಯಲ್ಲಿ ನಡೆದ ಪ್ಯೂಚರ್‌ ಲೈಫ್ ಇಂಡಿಯಾ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆಯನ್ನು ಮುಖ್ಯಸ್ಥ ವಿಜಯ್‌ಕುಮಾರ್‌ ಉದ್ಘಾಟಿಸಿದರು
ಹೊಸಕೋಟೆಯಲ್ಲಿ ನಡೆದ ಪ್ಯೂಚರ್‌ ಲೈಫ್ ಇಂಡಿಯಾ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆಯನ್ನು ಮುಖ್ಯಸ್ಥ ವಿಜಯ್‌ಕುಮಾರ್‌ ಉದ್ಘಾಟಿಸಿದರು   

ಹೊಸಕೋಟೆ: ಪ್ಯೂಚರ್‌ ಲೈಫ್ ಇಂಡಿಯಾ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಸಣ್ಣ ವ್ಯಾಪಾರಿಗಳು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಸೊಸೈಟಿ ಮುಖ್ಯಸ್ಥ ಕೆ. ವಿಜಯ್ ಕುಮಾರ್‌ ತಿಳಿಸಿದರು.

ನಗರದ ಜೆ.ಸಿ. ಸರ್ಕಲ್‌ನಲ್ಲಿ ಸೊಸೈಟಿಯ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಸೊಸೈಟಿಯು ರಾಜ್ಯದಾದ್ಯಂತ ಶಾಖೆಗಳನ್ನು ಹೊಂದಿದ್ದು ಸಾವಿರಕ್ಕೂ ಹೆಚ್ಚು ಸದಸ್ಯರು ಇದ್ದಾರೆ ಎಂದು ತಿಳಿಸಿದರು.

ಬಡವರು, ಶೋಷಿತರ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಪ್ರಾರಂಭವಾಗಿರುವ ಸೊಸೈಟಿಯಲ್ಲಿ ಸದಸ್ಯರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈಗಾಗಲೇ, ಸಾವಿರಾರು ಜನರು ಇದರ ಸದುಪಯೋಗ ಪಡೆದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸೊಸೈಟಿಯ ಪ್ರಮುಖರಾದ ಮುನಿರಾಜು, ಗೋವಿಂದಪ್ಪ, ಎಂ. ಬಸವರಾಜ್, ಸುಶೀಲ, ನಾಗರಾಜ್, ಟಿ. ಮುನಿರಾಜು, ರಾಮ್‌ಕುಮಾರ್‌, ಕೆ.ಪಿ. ಬಾಬು ಶಿವಕುಮಾರ್‌, ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.