ADVERTISEMENT

ರಾಜ್ಯದಲ್ಲಿ ಹೊಸ ಘಳಿಗೆ ಆರಂಭದ ಶುಭ ಸೂಚನೆ: ಡಿ.ಕೆ. ಸುರೇಶ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 20:13 IST
Last Updated 4 ಜನವರಿ 2026, 20:13 IST
<div class="paragraphs"><p>ಡಿ.ಕೆ. ಸುರೇಶ್‌</p></div>

ಡಿ.ಕೆ. ಸುರೇಶ್‌

   

ಆನೇಕಲ್: ರಾಜ್ಯದಲ್ಲಿ ಹೊಸ ಘಳಿಗೆ, ಹೊಸ ದಿನಗಳು ಆರಂಭವಾಗುವ ಶುಭ ಸೂಚನೆಗಳು ಕಾಣಿಸುತ್ತಿವೆ ಎಂದು ಬಮುಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಸುಳಿವು ನೀಡಿದ್ದಾರೆ.

ಒಕ್ಕಲಿಗರ ಸಂಘ ಬನ್ನೇರುಘಟ್ಟದಲ್ಲಿ ಭಾನುವಾರ ಒಕ್ಕಲಿಗ ಸಮುದಾಯದ ಜನಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗ ಸಮಾಜದ ಪ್ರತಿಯೊಬ್ಬರು ಡಿ.ಕೆ.ಶಿವಕುಮಾರ್‌ ಅವರ ಜೊತೆ ಗಟ್ಟಿಯಾಗಿ ನಿಲ್ಲಬೇಕು ಎಂದು ಅವರು ಒಕ್ಕಲಿಗ ಸಮುದಾಯದಕ್ಕೆ ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್‌ ಅವರಿಗೆ ರಾಜಕೀಯ ಶಕ್ತಿ ದೊರೆಯುವಂತಾಗಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ. ಅವರಿಗೆ ನೀಡಿದ ಸಹಕಾರವನ್ನು ಶಿವಕುಮಾರ್‌ ಅವರಿಗೂ ನೀಡುವುದರಿಂದ ಒಕ್ಕಲಿಗ ಸಮುದಾಯದ ನಾಯಕನಿಗೆ ರಾಜ್ಯದಲ್ಲಿ ಉನ್ನತ ರಾಜಕೀಯ ಸ್ಥಾನಮಾನ ದೊರೆಯುತ್ತದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್‌.ಶ್ರೀನಿವಾಸ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.