ADVERTISEMENT

ತಾಲ್ಲೂಕಿನ ನಾಲ್ಕು ಮಂದಿಗೆ ಪದಕ

ಆನ್‌ಲೈನ್‌ನಲ್ಲಿ ಟೇಕ್ವಾಂಡೂ ಚಾಂಪಿಯನ್ ಶಿಪ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 14:56 IST
Last Updated 7 ಜೂನ್ 2020, 14:56 IST
ಎನ್‌.ಯಶ್ವಂತ್
ಎನ್‌.ಯಶ್ವಂತ್   

ದೊಡ್ಡಬಳ್ಳಾಪುರ: ಇನ್‌ಫಿನಿಯೋ ಟೇಕ್ವಾಂಡೂ ವರ್ಡ್‌ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ಆನ್‌ಲೈನ್‌ ನ್ಯಾಷನಲ್ ಒಪನ್ ಟೇಕ್ವಾಂಡೂ ಚಾಂಪಿಯನ್ ಶಿಪ್-2020ರಲ್ಲಿ ದೊಡ್ಡಬಳ್ಳಾಪುರದ ನಾಲ್ಕು ಮಂದಿ ಟೇಕ್ವಾಂಡೂ ಪಟುಗಳುಚಿನ್ನ,ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.

ಇತ್ತೀಚೆಗಷ್ಟೇ ರಾಷ್ಟ್ರ ಮಟ್ಟದ ಟೇಕ್ವಾಂಡೂ ಸ್ಪರ್ಧೆಯನ್ನು ಆನ್‍ಲೈನ್ ಮೂಲಕ ಆಯೋಜಿಸಲಾಗಿತ್ತು. ಈ ಪ್ರತಿಷ್ಠಿತ ಸ್ಫರ್ಧೆಯಲ್ಲಿ ಸುಮಾರು ಹದಿನೆಂಟು ರಾಜ್ಯಗಳ ಸ್ಫರ್ಧಿಗಳು ಆನ್‍ಲೈನ್ ಮೂಲಕ ಸ್ಫರ್ಧಿಸಿದ್ದರು. ದೊಡ್ಡಬಳ್ಳಾಪುರದ ಶಂಕರ್ ಟೇಕ್ವಾಂಡೂ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಈ ನಾಲ್ವರು ರಾಜ್ಯವನ್ನು ಪ್ರತಿನಿಧಿಸಿದ್ದರು.

ಹತ್ತು ವರ್ಷಗಳ ವಯೋಮಿತಿಯ ಬ್ಲಾಕ್ ಬೆಲ್ಟ್ ಶ್ರೇಣಿಯ ಸ್ಪೀಡ್ ಕಿಕ್ಕಿಂಗ್‍ನ ಸ್ಫರ್ಧೆಯಲ್ಲಿ ಹರ್ಷಿತಾ (60 ಸೆಕೆಂಡ್‍ನಲ್ಲಿ 103 ಬಾರಿ ರೌಂಡ್ಸ್ ಕಿಕ್) ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಆರ್‌.ಅರ್ಪಿತಾ ಕಲರ್ ಬೆಲ್ಟ್ ಶ್ರೇಣಿಯ ಸ್ಫರ್ಧೆಯಲ್ಲಿ (60 ಸೆಕೆಂಡ್‍ನಲ್ಲಿ 97 ಬಾರಿ ಕಿಕ್‌) ಕಂಚು ಪಡೆದಿದ್ಧಾರೆ.

ADVERTISEMENT

ಹನ್ನೆರೆಡು ವರ್ಷದವರ ಸಬ್ ಜೂನಿಯರ್ ಬ್ಲಾಕ್ ಬೆಲ್ಟ್ ರೌಂಡ್ಸ್ ಕಿಕ್ ಸ್ಫರ್ಧೆಯಬಾಲಕರ ವಿಭಾಗದಲ್ಲಿ ಎನ್‌.ಯಶ್ವಂತ್ 60 ಸೆಕೆಂಡ್‍ಗಳಲ್ಲಿ 150 ಡಬ್ಲಿಂಗ್ ರೌಂಡ್ಸ್‌ ಕಿಕ್‌ ಮಾಡಿ ಚಿನ್ನದ ಪದಕ ಮತ್ತು 60 ಸೆಕೆಂಡ್‍ಗಳಲ್ಲಿ 105 ಬಾರಿ ರೌಂಡಸ್ ಕಿಕ್ ಮಾಡಿ ಕಂಚಿನ ಪದಕ ಸಹ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿಬಿ.ಜೋಸ್ನಶರ್ಮ 60 ಸೆಕೆಂಡ್‍ನಲ್ಲಿ 98 ಬಾರಿ ಕಿಕ್ ಮಾಡಿ ಬೆಳ್ಳಿ ಪದಕ ಗಳಿಸಿದ್ದಾರೆ.

ಈ ಬಗ್ಗೆ ತರಬೇತುದಾರ ಶಂಕರ್ ಮಾತನಾಡಿ, ತಾಲ್ಲೂಕಿನ ಟೇಕ್ವಾಂಡೂ ಪ್ರತಿಭೆಗಳು ಈಗಾಗಲೇ ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟಗಳಲ್ಲಿ ಹಲವು ಬಾರಿ ಚಿನ್ನದ ಪದಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.