
ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಪ್ರಾಣಿವಿನಿಮಯ ಯೋಜನೆಯಡಿಯಲ್ಲಿ ಹೈದರಾಬಾದ್‌ನ ನೆಹರು ಜೈವಿಕ ಉದ್ಯಾನಕ್ಕೆ ಸ್ಥಳಾಂತರಗೊಳ್ಳಲು ಕ್ವಾರೆಂಟೈನ್‌ಗೆ ಸಾಗಿಸುವ ವೇಳೆ ಹೆಣ್ಣು ಕಾಡೆಮ್ಮೆ(ಗೌರ್) ಶುಕ್ರವಾರ ಮೃತಪಟ್ಟಿದೆ.
ಪ್ರಾಥಮಿಕ ಹಂತದಲ್ಲಿ ಕಾಡೆಮ್ಮೆಯನ್ನು ಕ್ವಾರೆಂಟೈನ್ ಮಾಡಿ ವಿವಿಧ ವೈದ್ಯಕೀಯ ತಪಾಸಣೆಯನ್ನು ನಡೆಸಬೇಕಿತ್ತು. ಇದಕ್ಕಾಗಿ ಜೈವಿಕ ಉದ್ಯಾನ ವ್ಯಾಪ್ತಿಯಲ್ಲಿ ಕಾಡೆಮ್ಮೆಯನ್ನು ಕ್ವಾರೆಂಟೈನ್ ಮಾಡಲು ಕ್ರೇನ್ ಮೂಲಕ ಸಾಗಿಸುವಾಗಿ ಬೆಲ್ಟ್ ಹಾಕುವ ಸಮಯದಲ್ಲಿ ಕಾಡೆಮ್ಮೆ ಗಾಬರಿಗೊಂಡು ಮತ್ತು ಉಸಿರಾಟದ ಏರುಪೇರಿನಿಂದ ಮೃತಪಟ್ಟಿದೆ ಎಂದು ಉದ್ಯಾನವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕ್ವಾರೆಂಟೈನ್‌ಗೆ ಸ್ಥಳಾಂತರಿಸಲು ಬನ್ನೇರುಘಟ್ಟದ ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಕಾಡೆಮ್ಮೆಯು ಗಾಬರಿಗೊಂಡಿ ಮತ್ತು ಬೆಲ್ಟ್‌ನ ಕಾರಣದಿಂದ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.