ADVERTISEMENT

ಬನ್ನೇರುಘಟ್ಟ: ವಿಶ್ವ ಆನೆ ದಿನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 0:41 IST
Last Updated 15 ಆಗಸ್ಟ್ 2025, 0:41 IST
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ಆನೆ ದಿನ ಆಚರಿಸಲಾಯಿತು
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ಆನೆ ದಿನ ಆಚರಿಸಲಾಯಿತು   

ಆನೇಕಲ್: ‌ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದ ವಿಶ್ವ ಆನೆ ದಿನದಂದು ‘ಮಾನವ ಮತ್ತು ಆನೆ ಸಹಬಾಳ್ವೆ’ ವಿಷಯಾಧಾರಿತ ಕಾರ್ಯಕ್ರಮ ಗುರುವಾರ ನಡೆಯಿತು.

ಪ್ರವಾಸಿಗರಿಗೆ ಆನೆಗಳ ಪರಿಚಯ, ಮಾವುತರು, ಕಾವಡಿಗಳು ಮತ್ತು ರಾತ್ರಿ ವೀಕ್ಷಕರು ನಿರ್ವಹಿಸುವ ನಿರ್ಣಾಯಕ ಪಾತ್ರಗಳ ಬಗ್ಗೆ ವಿವರಿಸಲಾಯಿತು.

ಈಚೆಗೆ ಪ್ರಾಣಿ ವಿನಿಮಯ ಯೋಜನೆಯಡಿ ಜಪಾನ್‌ಗೆ ಬನ್ನೇರುಘಟ್ಟದ ನಾಲ್ಕು ಆನೆ ಸ್ಥಳಾಂತರ ಮಾಡಿದ ಅನುಭವವನ್ನು ಸಿಬ್ಬಂದಿ ಹಂಚಿಕೊಂಡರು.

ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನ ಕಾರ್ಯ ನಿರ್ವಹಣಾಧಿಕಾರಿ ಎ.ವಿ.ಸೂರ್ಯಸೇನ್, ಮಾನವ ಮತ್ತು ಆನೆ ಸಂಘರ್ಷ ನಿರ್ವಹಣೆ, ಮಾವುತರ ಬಾಂಧವ್ಯ ವಿವರಿಸುವ ಸಲುವಾಗಿ ವಿಶ್ವ ಆನೆ ದಿನ ಆಯೋಜಿಸಲಾಗಿದೆ ಎಂದರು.

ಬನ್ನೇರುಘಟ್ಟ ಜೈವಿಕ ಉದ್ಯಾನ, ಅಂಚೆ ಇಲಾಖೆ, ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ, ರೊಟ್ರಾಕ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿವೃತ್ತ ಮಾವುತರಾದ ಮೋಟ ಮತ್ತು ಭಾಸ್ಕರ್ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. 

ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ಆನೆ ದಿನದ ಪ್ರಯುಕ್ತ ಆನೆ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.