ADVERTISEMENT

ಮತದಾನ ಜಾಗೃತಿಗೆ ಬೀದಿನಾಟಕ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 13:00 IST
Last Updated 17 ಏಪ್ರಿಲ್ 2019, 13:00 IST

ಸೂಲಿಬೆಲೆ: ನಂದಗುಡಿಯ ಗಾಂಧಿ ಸರ್ಕಲ್ ಆವರಣದಲ್ಲಿ ಬೆಂಗಳೂರಿನ ‘ಸುವರ್ಣ ದೀಪ ಚಾಲೆಂಜ್ಡ್ ಡೆವಲಪ್‌ಮೆಂಟ್ ಟ್ರಸ್ಟ್’ ಸದಸ್ಯರಿಂದ ಮಂಗಳವಾರ ರಾತ್ರಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ನಡೆಯಿತು.

ಮತದಾನ ಸಂವಿಧಾನಾತ್ಮಕ ಹಕ್ಕಾಗಿದ್ದು ತಪ್ಪದೇ ಮತ ಚಲಾಯಿಸಿ. ಪ್ರಜಾಪ್ರಭುತ್ವದ ಬಲವರ್ಧನೆಗೆ ಕಡ್ಡಾಯವಾಗಿ ಮತದಾನ ಮಾಡಿ. ಜಾಗೃತ ಮತದಾರ ಸದೃಢ ಪ್ರಜಾಪ್ರಭುತ್ವದ ನಿರ್ಮಾಣಕಾರ. ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ. ಯಾವುದೇ ಆಸೆ–ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ ಎಂಬ ಸಂದೇಶವನ್ನು ನಾಟಕದ ಮೂಲಕ ನೀಡಲಾಯಿತು.

ಕಲಾವಿದರಾದ ದೀಪಕ್.ಆರ್ ಸಾಗರ್, ಮಹಿಮ ಕೆ ಬೆಲ್ಲ, ರಮಿತ, ಲೀಲಾವತಿ, ವಿಶೇಷ ಚೇತನ, ಭಾಗ್ಯಶ್ರೀ, ಬಸವರಾಜು, ರಂಗಭೂಮಿ ಕಲಾವಿದ ಎನ್.ಎಸ್.ಸೂರ್ಯನಾರಾಯಣ ರಾವ್, ಮಂಜುಳ ಮೋಹನ್, ಗೋಪಾಲ್ ಹೆಳವರ್ ಅಭಿನಯದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.