
ಪ್ರಜಾವಾಣಿ ವಾರ್ತೆ
ಬಿಡದಿ: ಪ್ಯಾಸೆಂಜರ್ ರೈಲು ವಿಳಂಬ ಖಂಡಿಸಿ ಪ್ರಯಾಣಿಕರ ಪ್ರತಿಭಟನೆ
ಬಿಡದಿ (ರಾಮನಗರ): ಮೈಸೂರು–ಬೆಂಗಳೂರು ನಡುವಣ ಸಂಚರಿಸುವ ಅಶೋಕಪುರಂ ಮೆಮು ಪ್ಯಾಸೆಂಜರ್ ರೈಲು ಒಂದೂವರೆ ತಾಸು ವಿಳಂಬವಾಗಿದ್ದನ್ನು ಖಂಡಿಸಿ ಪ್ರಯಾಣಿಕರು ಭಾನುವಾರ ಸಂಜೆ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.‘
ಮೈಸೂರಿಗೆ ಹೊರಟಿದ್ದ ರೈಲು ನಿಲ್ದಾಣದಿಂದ ಒಂದೂವರೆ ತಾಸಾದರೂ ಕದಲಿಲ್ಲ. ಕಾದು ಹೈರಾಣಾದ ಪ್ರಯಾಣಿಕರು ನಂತರ ಹೊರಬಂದು ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಲು ಮುಂದಾದರು. ಆದರೆ, ಸ್ಟೇಷನ್ ಮಾಸ್ಟರ್ ಕೊಠಡಿ ಬಾಗಿಲು ಹಾಕಿತ್ತು. ಉಳಿದ ಸಿಬ್ಬಂದಿ ಸಹ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ.
ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ರೈಲು ಹೇಳಿ ಮೇಲೆ ನಿಂತು ಪ್ರತಿಭಟನೆ ಆರಂಭಿಸಿದರು. ರೈಲ್ವೆ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.