ADVERTISEMENT

ಬಿಎಂಟಿಸಿ ಸಂಚಾರ ಸ್ಥಗಿತ

ಖಾಸಗಿ ಬಸ್‌ ಮೊರೆ ಹೋದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 2:41 IST
Last Updated 8 ಏಪ್ರಿಲ್ 2021, 2:41 IST
ಖಾಸಗಿ ಬಸ್‌ ಮೊರೆ ಹೋದ ಪ್ರಯಾಣಿಕರು
ಖಾಸಗಿ ಬಸ್‌ ಮೊರೆ ಹೋದ ಪ್ರಯಾಣಿಕರು   

ದೇವನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಪರಿಣಾಮ ಪ್ರಯಾಣಿಕರು ಪರದಾಡಿದರು. ಕೊನೆಗೆ, ಖಾಸಗಿ ಬಸ್‌ಗಳ ಮೊರೆ ಹೋಗುವಂತಾಯಿತು.

ಸದಾ ಜನದಟ್ಟಣೆಯಿಂದ ತುಂಬಿರುತ್ತಿದ್ದ ಪಟ್ಟಣದ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆ ಇತ್ತು. ಸಾರಿಗೆ ಬಸ್‌ಗಳು ಮತ್ತು ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಸರ್ಕಾರ ಖಾಸಗಿ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದರೂ ದುಪ್ಪಟ್ಟು ದರ ನೀಡಿ ನಿರ್ವಾಹಕರನ್ನು ಶಪಿಸುತ್ತಲೇ ಪ್ರಯಾಣಿಕರು ತೆರಳಿದರು. ಕೆಲವು ಪ್ರಯಾಣಿಕರು ನಿಗದಿತ ಸಮಯಕ್ಕೆ ತುರ್ತಾಗಿ ಹೋಗಬೇಕಾದ ಅನಿವಾರ್ಯತೆಯಿಂದ ಖಾಸಗಿ ಬಸ್ ಹತ್ತಿ ತೆರಳುತ್ತಿದ್ದುದು ಸಾಮಾನ್ಯವಾಗಿತ್ತು.

‘ದೇವನಹಳ್ಳಿ ಬಸ್‌ನಿಲ್ದಾಣದಿಂದ ಚಿಕ್ಕಬಳ್ಳಾಪುರದ ಕಡೆಗೆ 10 ನಿಮಿಷಗಳಿಗೊಮ್ಮೆ ಮತ್ತು ಬೆಂಗಳೂರು ನಗರದ ಕಡೆಗೆ 20 ನಿಮಿಷಗಳಿಗೊಮ್ಮೆ ಖಾಸಗಿ ಬಸ್‌ ಕಾರ್ಯಾಚರಣೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು 60 ಖಾಸಗಿ ಬಸ್‌ಗಳನ್ನು ಪ್ರಯಾಣಿಕರಿಗಾಗಿ ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡದಂತೆ ಬಸ್ ಮಾಲೀಕರು ಮತ್ತು ನಿರ್ವಾಹಕರಿಗೆ ಸೂಚಿಸಲಾಗಿದೆ’ ಎಂದು ಆರ್‌ಟಿಓ ಉಮೇಶ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.