ADVERTISEMENT

ದೇಶದಲ್ಲಿ ಉದ್ಯೋಗ ಅವಕಾಶಕ್ಕೆ ಹೆಚ್ಚಿನ ಒತ್ತು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 19:31 IST
Last Updated 3 ಡಿಸೆಂಬರ್ 2018, 19:31 IST
ಉದ್ಯೋಗ ಮೇಳಕ್ಕೆ ಬಿಜೆಪಿ ಮುಖಂಡ ಬಿ.ಎನ್.ಬಚ್ಚೇಗೌಡ ಚಾಲನೆ ನೀಡಿದರು. (ಎಡದಿಂದ) ಇನ್ ಸಿಗ್ನಿಯಾ ಈವೆಂಟ್ ಸಿಇಒ ಪ್ರಸಾದ್, ಶರತ್ ಕುಮಾರ್ ಗೌಡ, ಸಿ.ಮಂಜುನಾಥ್, ಟಿ.ಸೊಣ್ಣಪ್ಪ ಇದ್ದಾರೆ
ಉದ್ಯೋಗ ಮೇಳಕ್ಕೆ ಬಿಜೆಪಿ ಮುಖಂಡ ಬಿ.ಎನ್.ಬಚ್ಚೇಗೌಡ ಚಾಲನೆ ನೀಡಿದರು. (ಎಡದಿಂದ) ಇನ್ ಸಿಗ್ನಿಯಾ ಈವೆಂಟ್ ಸಿಇಒ ಪ್ರಸಾದ್, ಶರತ್ ಕುಮಾರ್ ಗೌಡ, ಸಿ.ಮಂಜುನಾಥ್, ಟಿ.ಸೊಣ್ಣಪ್ಪ ಇದ್ದಾರೆ   

ಹೊಸಕೋಟೆ: ದೇಶದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿದ್ದರೂ ಉದ್ಯೋಗ ಸೃಷ್ಟಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವಾರು ವಿದೇಶಿ ಕಂಪನಿಗಳು ದೇಶದಲ್ಲಿ ಬಂಡವಾಳ ಹೂಡುವಂತೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಎನ್.ಬಚ್ಚೇಗೌಡ ಹೇಳಿದರು.

ಪಟ್ಟಣದ ವಿವೇಕಾನಂದ ಶಾಲೆ ಆವರಣದಲ್ಲಿ ತಾಲ್ಲೂಕು ಘಟಕದ ಬಿಜೆಪಿ ಡಿ. 1ಮತ್ತು 2ರಂದು ಆಯೋಜಿಸಿರುವ ಕೌಶಲ ತರಬೇತಿ ಮತ್ತು ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ವಯಂ ಉದ್ಯೋಗ ಕಲ್ಪಿಸುವಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ಸೌಲಭ್ಯ ನೀಡುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಸಹ ಜಾರಿಗೆ ತಂದಿದ್ದಾರೆ’ ಎಂದರು.

ಮುಖಂಡ ಶರತ್ ಕುಮಾರ್ ಗೌಡ ಮಾತನಾಡಿ, ‘ತಾಲ್ಲೂಕಿನ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ. ಅವರಿಗೆ ನೆರವಾಗುವಲ್ಲಿ ಕೌಶಲ ತರಬೇತಿಯನ್ನೂ ನೀಡಲಾಗುತ್ತಿದೆ. ಸುಮಾರು 2 ಸಾವಿರ ಯುವಕರು ಹೆಸರು ನೋಂದಾಯಿಸಿದ್ದು 56 ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ’ ಎಂದು ಅವರು ಹೇಳಿದರು. ವೃಕ್ಷಂ ಕಂಪನಿ ಸಿಇಓ ಸುರೇಶ್,ಮುಖಂಡ ಸಿ.ಮಂಜುನಾಥ್ ಮಾತನಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.