ADVERTISEMENT

ಗಾಯತ್ರಿ ವಿದ್ಯಾ ಮಂದಿರ: ಪುಸ್ತಕ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 11:21 IST
Last Updated 25 ಜೂನ್ 2019, 11:21 IST
ಹೊಸಕೋಟೆಯ ಗಾಯತ್ರಿ ವಿದ್ಯಾ ಮಂದಿರ ಮಂದಿರ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ಭಾರತ ಸರ್ಕಾರದ ಭವಿಷ್ಯ ನಿಧಿ ಸದಸ್ಯ ವಿಜಯಕುಮಾರ್ ವಿತರಿಸಿದರು. ನಗರಸಭೆಯ ಸದಸ್ಯ ಮುನಿನಂಜಪ್ಪ, ಶಾಲಾ ಗೌರವ ಅದ್ಯಕ್ಷ ಪಿ.ಎಸ್. ಮಂಜುನಾಥ್, ಕಾರ್ಯದರ್ಶಿ ಚಂದ್ರಪ್ಪ, ಸಮಾಜ ಸೇವಕ ಬಿಸೇಗೌಡ, ಮುಖ್ಯ ಶಿಕ್ಷಕ ನಟರಾಜ್, ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

ಹೊಸಕೋಟೆ: ಇಲ್ಲಿನ ಗಾಯತ್ರಿ ವಿದ್ಯಾ ಮಂದಿರ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ಭಾರತ ಸರ್ಕಾರದ ಭವಿಷ್ಯ ನಿಧಿ ಸದಸ್ಯರಾದ ವಿಜಯಕುಮಾರ್ ವಿತರಿಸಿದರು.

ಅನಂತರ ಮಾತನಾಡಿದ ಅವರು, ‘ಈ ಶಾಲೆಗೆ ಬರುವ ಮಕ್ಕಳು ಶಾಲೆಯ ಕನಿಷ್ಠ ಶುಲ್ಕವನ್ನು ಸಹಿತ ಕಟ್ಟಲು ಆಗುವುದಿಲ್ಲ, ಅಂತಹ ಮಕ್ಕಳಿಗೆ ಕಳೆದ 33 ವರ್ಷಗಳಿಂದ ಶಾಲೆ ನಡೆಸುತ್ತಿರುವ ಶಾಲಾ ಮಂಡಲಿಯವರು ವಿವಿಧ ಕಡೆಗಳಿಂದ ದೇಣಿಗೆ ತಂದು ಶಾಲೆ ನಡೆಸುತ್ತಿದ್ದು ಕನ್ನಡ ಮಾಧ್ಯಮದ ಶಾಲೆ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.

‘ತಮ್ಮ ತಾತನವರ ಸ್ಮರಣಾರ್ಥ ಕಳೆದ 9 ವರ್ಷಗಳಿಂದ ಎಲ್ಲ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸುತ್ತಿದ್ದು ಮುಂದಿನ ವರ್ಷಗಳಲ್ಲಿಯೂ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು. ಸಮಾಜದಲ್ಲಿರುವ ಅನುಕೂಲಸ್ಠರು ಇಂತಹ ಶಾಲೆಗಳಿಗೆ ಸಹಾಯ ಮಾಡುವಂತೆ’ ಮನವಿ ಮಾಡಿದರು.

ADVERTISEMENT

ನಗರಸಭೆಯ ಸದಸ್ಯ ಮುನಿನಂಜಪ್ಪ, ಶಾಲಾ ಗೌರವ ಅಧ್ಯಕ್ಷ ಪಿ.ಎಸ್. ಮಂಜುನಾಥ್, ಕಾರ್ಯದರ್ಶಿ ಚಂದ್ರಪ್ಪ, ಸಮಾಜ ಸೇವಕ ಬಿಸೇಗೌಡ, ಮುಖ್ಯ ಶಿಕ್ಷಕ ನಟರಾಜ್ ಹಾಗೂ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.