ADVERTISEMENT

ಬ್ರಾಹ್ಮಣ ಜಾಗೃತ ವೇದಿಕೆ ಸಭೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 5:46 IST
Last Updated 29 ಸೆಪ್ಟೆಂಬರ್ 2022, 5:46 IST
ಹೊಸಕೋಟೆಯ ಬ್ರಾಹ್ಮಣರ ಬೀದಿಯಲ್ಲಿ ಬ್ರಾಹ್ಮಣ ಜಾಗೃತ ವೇದಿಕೆಯಿಂದ ನಡೆದ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಮಾತನಾಡಿದರು
ಹೊಸಕೋಟೆಯ ಬ್ರಾಹ್ಮಣರ ಬೀದಿಯಲ್ಲಿ ಬ್ರಾಹ್ಮಣ ಜಾಗೃತ ವೇದಿಕೆಯಿಂದ ನಡೆದ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಮಾತನಾಡಿದರು   

ಹೊಸಕೋಟೆ: ‘ಬ್ರಾಹ್ಮಣರಿಗೆ ಮೊದಲಿನಿಂದಲೂ ರಾಜಾಶ್ರಯವಿತ್ತಾದರೂ ರಾಜರನ್ನು ಆಯ್ಕೆ ಮಾಡಿ ಅವರನ್ನು ಪಟ್ಟದಲ್ಲಿ ಕೂರಿಸುವ ಕೆಲಸವನ್ನು ಬ್ರಾಹ್ಮಣರೇ ಮಾಡುತ್ತಿದ್ದರು’ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದಲ್ಲಿ ಬ್ರಾಹ್ಮಣ ಜಾಗೃತ ವೇದಿಕೆಯಿಂದ ನಿರ್ಮಾಣವಾಗುತ್ತಿರುವ ನೂತನ ಕಟ್ಟಡ ವೀಕ್ಷಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬ್ರಾಹ್ಮಣ ಜನಾಂಗದ ಜನಸಂಖ್ಯೆ ಬಹಳ ಕಡಿಮೆಯಿದೆ. ಅವರು ಅಲ್ಪಸಂಖ್ಯಾತರಾದರೂ ಕಾಲಾನುಕಾಲದಿಂದ ಸ್ಥಿತಿವಂತರಾಗಿದ್ದಾರೆ ಎಂದರು.

ADVERTISEMENT

ತಾವು ಮತ್ತೆ ಅಧಿಕಾರಕ್ಕೆ ಬರಲು ಬ್ರಾಹ್ಮಣ ಸಮಾಜದ ಬೆಂಬಲ ಮತ್ತು ಆಶೀರ್ವಾದದ ಅಗತ್ಯವಿದೆ ಎಂದರು.

ಸಂಘದ ಅಧ್ಯಕ್ಷ ನರಸಿಂಹ ಹೆಬ್ಬಾರ್‌, ‘ಶಾಸಕರಿಗೆ ಸಂಘದ ಬಗ್ಗೆ ಹೆಚ್ಚು ಅಭಿಮಾನವಿದೆ. ಸಂಘ ಮತ್ತು ಸಮಾಜಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಅವರ ತಂದೆಯ ಕಾಲದಿಂದಲೂ ಬ್ರಾಹ್ಮಣ ಸಮಾಜದ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ’ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಪಿ. ಶ್ರೀನಿವಾಸಯ್ಯ, ಉಪಾಧ್ಯಕ್ಷ ಉದಯ್ ಅಯ್ಯರ್‌, ಖಜಾಂಚಿ ಫಣಿರಾಜ್, ಗ್ರಾಮ ಪಂಚಾಯಿತಿ ಸದಸ್ಯ ಗುಟ್ಟಹಳ್ಳಿ ಮಂಜುನಾಥ್, ಅಕ್ಷಯ ವಿಪ್ರ ಮಹಾಸಭಾದ ಅಧ್ಯಕ್ಷ ರಾಜಣ್ಣ, ನಗರಸಭೆ ಸದಸ್ಯ ಗೌತಮ್, ಮುಖಂಡ ನಾರಾಯಣಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.