ADVERTISEMENT

ದೇವನಹಳ್ಳಿ| 165 ಬ್ಲಾಕ್‌ಸ್ಪಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ: ಕೆ.ಎನ್.‌ ಅನುರಾಧ

101 ಪಂಚಾಯಿತಿಗಳಲ್ಲಿ ಸ್ವಚ್ಛತೆ ಆಂದೋಲನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 2:15 IST
Last Updated 20 ಸೆಪ್ಟೆಂಬರ್ 2025, 2:15 IST
ಕೆ.ಎನ್.‌ ಅನುರಾಧ
ಕೆ.ಎನ್.‌ ಅನುರಾಧ   

ದೇವನಹಳ್ಳಿ: ಜಿಲ್ಲೆಯಲ್ಲಿ ಒಟ್ಟು 165 ಬ್ಲಾಕ್‌ ಸ್ಪಾಟ್‌ ಗುರುತಿಸಲಾಗಿದ್ದು, ಎಲ್ಲಾ ಬ್ಲಾಕ್‌ ಸ್ಪಾಟ್‌ಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಐದು ರಾಷ್ಟ್ರೀಯ ಹೆದ್ದಾರಿಗಳಿದ್ದು, ಹೆದ್ದಾರಿ ಬದಿಗಳಲ್ಲಿ ಸುರಿದಿರುವ ಕಸವನ್ನು ತೆರವುಗೊಳಿಸಲಾಗಿದೆ. 23 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಕೆ.ಎನ್.‌ ಅನುರಾಧ ಎಚ್ಚರಿಕೆ ನೀಡಿದರು.

ದೇವಸ್ಥಾನ, ಮಾರುಕಟ್ಟೆ, ಬಸ್‌ ನಿಲ್ದಾಣ, ಆಸ್ಪತ್ರೆ, ಹಾಲಿನ ಕೇಂದ್ರ, ಶಾಲಾ- ಕಾಲೇಜು ಆವರಣ, ಜಲ ಸಂಪನ್ಮೂಲಗಳಾದ ಕೆರೆ, ಕಲ್ಯಾಣಿ ಗೋಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸರಿಯುವವರಿಂದ ದಂಡ ವಸೂಲಿ ಮಾಡಲಾಗುವುದು. ಜಿಲ್ಲೆಯಲ್ಲಿರುವ 101 ಪಂಚಾಯಿತಿಗಳಲ್ಲಿ ಸ್ವಚ್ಛತೆ ಅಂದೋಲನ ಆಯೋಜಿಸಿ, ಕಸ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ವಚ್ಛತಾ ಅರಿವು

ADVERTISEMENT

ಸ್ವಚ್ಛತೆಯ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.  ಶಾಲಾ–ಕಾಲೇಜುಗಳಲ್ಲಿ ಸ್ವಚ್ಛತಾ ಆಯೋಜಿಸಿ ಮಕ್ಕಳಿಗೆ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ, ಭಾಷಣ, ಬೀದಿ ನಾಟಕ, ಕರಪತ್ರ, ಪೋಷ್ಟರ್‌, ಗೋಡೆ ಬರಹ ಮುಂತಾದ ಚಟುವಟಿಕಯ ಮೂಲಕ ಜಾಗೃತಿ ಮೂಡಲಾಗುತ್ತಿದೆ ಎಂದು ತಿಳಿಸಿದರು.

ಸ್ವಚ್ಚ ಸಂಕೀರ್ಣ ಘಟಕ

101 ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ವಾಹಿನಿಗಳಿಗೆ ಜಿಪಿಎಸ್‌ ಅಳವಡಿಸಿದ್ದು, ಸಂಗ್ರಹವಾದ ಕಸವನ್ನು ಸ್ವಸಹಾಯ ಸಂಘದ ಮಹಿಳಾ ಒಕ್ಕೂಟ ಸದಸ್ಯರೊಂದಿಗೆ ಗ್ರಾಮ ಪಂಚಾಯಿತಿಯಿಂದ ಒಪ್ಪಂದ ಮಾಡಿಕೊಂಡು ಸ್ವಚ್ಛ ಸಂಕೀರ್ಣ ಘಟಕದಲ್ಲಿ ವಿಂಗಡಿಸಲಾಗುತ್ತಿದೆ ಎಂದರು. 

ಸ್ವಚ್ಚ ಭಾರತ್‌ ಮಿಷನ್‌ ಯೋಜನೆಯಡಿ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಚಸಂಕೀರ್ಣ ಘಟಕ ನಿರ್ಮಾಣ ಮಾಡಲಾಗಿದೆ. ಗ್ರಾಮಗಳಲ್ಲಿನ ಕುಟುಂಬಗಳಿಗೆ ಒಣ ತ್ಯಾಜ್ಯ ಸಂಗ್ರಹಣೆಗೆ ನೀಲಿ ಕಸದ ಬುಟ್ಟಿ ವಿತರಿಸಲಾಗಿದೆ. ಇದರಿಂದ ಕಸ ಸಂಗ್ರಹಣೆಗೆ ಅನುಕೂಲವಾಗಿದೆ ಎಂದರು.

ಸ್ವಚ್ಛತೆಗೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಮತ್ತು ಜವಾಬ್ದಾರಿ. ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತಮ್ಮ ಬೀದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಅಕ್ಕಪಕ್ಕ ಮನೆಯವರಿಗೆ ಅರುವು ಮೂಡಿಸಬೇಕು ಎಂದು ಹೇಳಿದರು.

ತರಕಾರಿ ದಿನಸಿ ಮತ್ತು ಮಾಂಸದ ಅಂಗಡಿಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ನಿಷೇದಿಸಿ ಸಾರ್ವಜನಿಕರಿಗೆ ಬಟ್ಟೆ ಮತ್ತು ಪೇಪರ್‌ ಚೀಲ ಬಳಸಲು ತಿಳಿಸಲಾಗಿದೆ.
ಕೆ.ಎನ್.‌ ಅನುರಾಧ ಸಿಇಒ ಜಿ.ಪಂ

ಕಸ ಸುರಿದ 105 ಮಂದಿ ವಿರುದ್ಧ ಎಫ್‌ಐಆರ್‌ 

ಜಿಲ್ಲೆಯ ಪ್ರಮುಖ ಗ್ರಾಮ ಮತ್ತು ರಸ್ತೆ ಬದಿಯಲ್ಲಿ ಕಸದ ರಾಶಿ ಇರುವ ಸ್ಥಳಗಳನ್ನು ಗುರುತಿಸಿ 32 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ದಿನನಿತ್ಯ ನಿಗಾವಹಿಸಲಾಗುತ್ತಿದೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕಸ ಹಾಕುವವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಈಗಾಗಲೆ 105 ಪ್ರಕರಣ ದಾಖಲಿಸಿದ್ದು ₹52500 ವಸೂಲಾತಿ ಮಾಡಲಾಗುತ್ತಿದೆ ಎಂದು ಜಿ.ಪಂ. ಸಿಇಒ ಕೆ.ಎನ್.‌ ಅನುರಾಧ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.