
\ದೇವನಹಳ್ಳಿ: 2027ಕ್ಕೆ ಜನಗಣತಿ ಶುರುವಾಗಲಿದ್ದು, ಜಿಲ್ಲೆಯಲ್ಲಿ ಜನಗಣತಿ ಕಾರ್ಯ ಕೈಗೊಳ್ಳಲು ಇಂದಿನಿಂದಲೇ ಪೂರ್ವ ಸಿದ್ಧತೆ ಕೈಗೊಂಡು ಗ್ರಾಮ, ಪಟ್ಟಣಗಳ ಗಡಿ ಗುರುತಿಸುವಿಕೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಬಿ ಬಸವರಾಜು ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಜನಗಣತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜನಗಣತಿಯನ್ನು ಯಾವುದೇ ಲೋಪದೋಷ ಇಲ್ಲದಂತೆ ಸಿದ್ಧಪಡಿಸಬೇಕು. ಮೊದಲು ಗ್ರಾಮಗಳ ಗಡಿಗಳ ಗುರುತಿಸುವಿಕೆ ಕಾರ್ಯ ನಡೆಯಲಿದೆ ಎಂದರು.
ಜನಸಂಖ್ಯೆ ಗಣತಿಯೂ 2027ರ ಫೆಬ್ರವರಿರಲ್ಲಿ ಆರಾರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಹೌಸ್ ಲಿಸ್ಟಿಂಗ್ ಮತ್ತು ಮನೆ ಗಣತಿ (ಹಂತ-01) ಕಾರ್ಯವು ಮುಂದಿನ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ನಡೆಯಲಿದೆ. ಜನಗಣತಿಯ ನಿರ್ದೇಶನಾಲಯವು ಗ್ರಾಮ ಮತ್ತು ಪಟ್ಟಣಗಳ ಪಟ್ಟಿ ನೀಡಿದ್ದು ಪರಿಷ್ಕೃತ ಪಟ್ಟಿ ನೀಡಲು ಸೂಚಿಸಿದೆ. ಗ್ರಾಮಗಳ ಪಟ್ಟಿ ಆಧರಿಸಿ ಗ್ರಾಮಗಳ ಗಡಿ ಗುರುತಿಸುವಿಕೆಯಲ್ಲಿ ತಹಶೀಲ್ದಾರ್ ಗಳು ಜವಾಬ್ದಾರಿ ವಹಿಸಬೇಕು ಎಂದು ಸೂಚಿಸಿದರು.
ಯಾವ ಗ್ರಾಮಗಳು, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಸೇರ್ಪಡೆ ಆಗಿವೆ. ವ್ಯತ್ಯಾಸಗಳೇನು ಎಂಬುದನ್ನು ದೃಢೀಕರಿಸಿ ಗ್ರಾಮಗಳ, ಪಟ್ಟಣಗಳ ಗಡಿಯನ್ನು ನವೆಂಬರ್ ಅಂತ್ಯದೊಳಗೆ ವರದಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಉಪವಿಭಾಗಾಧಿಕಾರಿ ದುರ್ಗಶ್ರೀ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್ ಉಪಸ್ಥಿತರಿದ್ದರು.
ಗ್ರಾಮಗಳ ಪಟ್ಟಿ (ತಾಲ್ಲೂಕು;ಗ್ರಾಮಗಳ ಸಂಖ್ಯೆ)
ದೇವನಹಳ್ಳಿ;230
ಹೊಸಕೋಟೆ;302
ದೊಡ್ಡಬಳ್ಳಾಪುರ;309
ನೆಲಮಂಗಲ;252
ಒಟ್ಟು;1093
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.