ADVERTISEMENT

ತೂಕದಲ್ಲಿ ಮೋಸ: ಅಂಗಡಿ ಪರವಾನಗಿ ರದ್ದಿಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 3 ಮೇ 2020, 13:18 IST
Last Updated 3 ಮೇ 2020, 13:18 IST
20 ಕೆ.ಜಿ ತೂಕಕ್ಕೆ ಬದಲಾಗಿ 18 ಕೆ.ಜಿ.ತೂಕ ಇರುವುದು
20 ಕೆ.ಜಿ ತೂಕಕ್ಕೆ ಬದಲಾಗಿ 18 ಕೆ.ಜಿ.ತೂಕ ಇರುವುದು   

ದೊಡ್ಡಬಳ್ಳಾಪುರ: ನಗರದ ಮಾರ್ಕೆಟ್ ರಸ್ತೆಯಲ್ಲಿನ ಜನತಾ ಬಜಾರ್ ನ್ಯಾಯಬೆಲೆ ಅಂಗಡಿಯ ಮೇಲೆ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಪರಿಶೀಲನೆ ವೇಳೆ ಪಡಿತರ ವಿತರಣೆಯಲ್ಲಿ 40 ಕೆ.ಜಿಗೆ ಬದಲಾಗಿ 36.2 ಕೆ.ಜಿ ಹಾಗೂ 20 ಕೆ.ಜಿ ಬದಲಿಗೆ 18 ಕೆ.ಜಿ ನೀಡುವ ಮೂಲಕ ತೂಕದಲ್ಲಿ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ರವೀಶ್‌ ಮಾತನಾಡಿ,‘ಪಡಿತರ ವಿತರಣೆಯ ತೂಕದಲ್ಲಿ ವಂಚನೆ ಆಗುತ್ತಿತ್ತು. ನ್ಯಾಯಬೆಲೆ ಅಂಗಡಿಯ ಮಾಲೀಕ ನರಸಿಂಹರಾಜು ಅವರು ಪಡೆದಿದ್ದ ಪರವಾನಗಿಯನ್ನು ರದ್ದು ಮಾಡುವಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಅಲ್ಲದೆ, ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.