
ದೊಡ್ಡಬಳ್ಳಾಪುರ: ತಾಲ್ಲೂಕು ಫೋಟೊ ಮತ್ತು ವಿಡಿಯೊ ಛಾಯಾಗ್ರಾಹಕರ ಸಂಘ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ ಯೋಜಿಸಿದ್ದ ಛಾಯಾ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಆಯೋಜಿಸಿತ್ತು.
5 ವರ್ಷದಿಂದ 14 ವರ್ಷದ ಒಳಗಿನ ಮಕ್ಕಳ ಫ್ಯಾಷನ್ ಷೊನಲ್ಲಿ ಬಸವಣ್ಣ,ವಿವೇಕಾನಂದ, ಕೊರವಂಜಿ ಛದ್ಮವೇಷ ಹಾಗೂ ಆಧುನಿಕ ಉಡುಪು ಧರಿಸಿದ್ದ ಪುಟಾಣಿಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಫ್ಯಾಶನ್ ಷೊದಲ್ಲಿ ಪೂರ್ವಿಕ ಪ್ರಥಮ, ಯಶಾ ಯಾದವ್ ದ್ವಿತೀಯ ಮತ್ತು ಜೆಸ್ವಿಕ ತೃತೀಯ ಬಹುಮಾನ ಪಡೆದರು. ರಂಗೋಲಿ ಸ್ಪರ್ಧೆಯಲ್ಲಿ ಸಂಜುಶ್ರೀ ಪ್ರಥಮ, ಸ್ಮಿತ ದ್ವಿತೀಯ ಮತ್ತು ಗಂಗಾ ತೃತೀಯ ಬಹುಮಾನ ಗಳಿಸಿದರು. ವಿಜೇತರಿಗೆ ಬಹುಮಾನ, ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.
ಮಕ್ಕಳಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆ ಹೊರತರಲು ಇಂತಹ ವೇದಿಕೆ ಅಗತ್ಯ ಎಂದು ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್.ಎಸ್.ನಾಗೇಶ್ ಹೇಳಿದರು.
ನಗರಸಭಾ ಸದಸ್ಯ ವಿ.ಎಸ್.ರವಿಕುಮಾರ್, ಎಚ್.ಎಸ್.ಶಿವಶಂಕರ್ ಛಾಯಾಗ್ರಾಹಕ ಸುರೇಶ್ ಬಾಬು, ಕಿರಣ್, ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ರವಿಕುಮಾರ್, ತಾಲ್ಲೂಕು ಫೋಟೊ ಮತ್ತು ವಿಡಿಯೊ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್.ಆರ್.ಮೋಹನ್, ಗೌರವ ಅಧ್ಯಕ್ಷ ಕೆ.ಸಂಪತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಾರುತಿ, ಉಪಾಧ್ಯಕ್ಷ ಗೋಪಾಲ್,ಮುನಿರಾಜು, ಖಜಾಂಚಿ ರಾಜಪ್ಪಿ, ಕಾರ್ಯಾಧ್ಯಕ್ಷ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ರಾಜೇಶ್, ಬೃಂದಾವನಿ, ಸಂಚಾಲಕ ಹರೀಶ್ ಬಾಬು ಸಂಘದ ನಿರ್ದೇಶಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.