ವಿಜಯಪುರ (ದೇವನಹಳ್ಳಿ): ಅಪರಾಧ ಕೃತ್ಯ ತಡೆಗಟ್ಟಲು, ಪರಾರಿಯಾದ ಆರೋಪಿಗಳ ಪತ್ತೆಗೆ ಸಿವಿಐಆರ್‌ಎಂಎಸ್ (ಸಿಟಿ ವಿಜಿಟರ್ಸ್ ಇನ್ ಫರ್ಮೇಷನ್, ರೇಕಾರ್ಡ್ ಮ್ಯಾನೇಜ್ ಮೆಂಟ್) ತಂತ್ರಾಂಶ ಆವಿಷ್ಕರಿಸಲಾಗಿದ್ದು, ಇದರಲ್ಲಿ ನೋಂದಾಯಿಸಿಕೊಲೊಳ್ಳುವಂತೆ ಪೊಲೀಸರು ಕೋರಿದರು.
ಈ ಸಂಬಂಧ ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್, ಚಿನ್ನಾಭರಣ ಮಳಿಗೆ, ಅಪಾರ್ಟ್ ಮೆಂಟ್, ಪಿ.ಜಿ, ಟ್ರಾವೆಲ್ಸ್ ಕ್ಲೌಡ್ ಕಿಚನ್ ನಡೆಸುತ್ತಿರುವವರು, ವಾಹನ ಮಾರಾಟಗಾರರು, ಉಪಯೋಗಿಸಿದ ವಾಹನ ಮಾರಾಟಗಾರರು, ಕೈಗಾರಿಕೆ ನಡೆಸುವವರು, ಬಾಡಿಗೆ ಮಾಲೀಕರಿಗೆ ತಂತ್ರಾಂಶ ಕುರಿತು ಅರಿವು ಮೂಡಿಸಲಾಯಿತು.
ಸಿವಿಐಆರ್‌ಎಂಎಸ್ ಇನ್ ಫರ್ಮಿಷನ್ ಲಿಮಿಟೆಡ್ ಸಿಬ್ಬಂದಿ ಜಿತಿನ್ ಗೌಡ ಮಾತನಾಡಿ, ತಂತ್ರಾಂಶ ಅಳವಡಿಸಿಕೊಂಡು ನಿಮ್ಮಲ್ಲಿಗೆ ಬರುವ ಗ್ರಾಹಕರು, ಮಾರಾಟಗಾರರ ಆಧಾರ್ ಕಾರ್ಡ್ ನಂಬರ್ ನಮೂದಿಸಿದರೆ ಆ ವ್ಯಕ್ತಿಗೆ ಸಂಬಂಧಿಸಿದಂತೆ ದೇಶದ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೆ, ಅಪರಾಧಿಯಾಗಿದ್ದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಮಿಕರ ನೇಮಿಸಿಕೊಳ್ಳುವಾಗ ಅವರ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದು ಮಾಡಬೇಕು. ಇದರಿಂದ ಮುಂದೆ ಆಗಬಹುದಾಗ ಅನಾಹುತ ತಪ್ಪಿಸಲು ಸಹಕಾರಿಯಾಗಲಿದೆ. ಕಳ್ಳತನ ಮಾಡಿರುವ ಚಿನ್ನದ ಒಡವೆ ತೆಗೆದುಕೊಂಡು ಮಾರಾಟ ಮಾಡುವವರನ್ನು ಸುಲಭವಾಗಿ ಕಂಡು ಹಿಡಿಯಬಹುದು ಎಂದು ತಿಳಿಸಿದರು.
ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್‌ಇನ್ ಸ್ಪೆಕ್ಟರ್ ಸಾಧಿಕ್ ಪಾಷ, ಗುಪ್ತ ಮಾಹಿತಿ ಕಾನ್ ಸ್ಟೆಬಲ್ ಅಶ್ವಥರೆಡ್ಡಿ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.