
ಪ್ರಜಾವಾಣಿ ವಾರ್ತೆ
ಹೊಸಕೋಟೆ : ವರದಾಪುರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸಿದ 45 ಮನೆಗಳನ್ನು ಶಾಸಕ ಶರತ್ ಬಚ್ಚೇಗೌಡ ಫಲಾನುಭವಿಗಳಿಗೆ ವಿತರಿಸಿದರು.
ಪ್ರತಿ ಮನೆ ನಿರ್ಮಾಣಕ್ಕೆ ₹7.5 ಲಕ್ಷ ವೆಚ್ಚವಾಗಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.
ಕೇಂದ್ರ ಸರ್ಕಾರ ನೀಡುವ ₹1.5ಲಕ್ಷ ಅನುದಾನವನ್ನು ಟೀಕಿಸಿದರು. ಈ ಮೊತ್ತದಲ್ಲಿ ₹1.35 ಲಕ್ಷ ಜಿಎಸ್‌ಟಿಗೆ ಹೋಗುವುದರಿಂದ ಕೇವಲ ₹15,000 ನಿಜವಾದ ಅನುದಾನ. ₹5 ಲಕ್ಷ ನೀಡುವ ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರದ ಹೆಸರು ಪ್ರಮುಖವಾಗಿ ಕಾಣುವುದು ಅನುಚಿತ ಎಂದು ವಾಗ್ದಾಳಿ ನಡೆಸಿದರು.
ಮುಂದಿನ ದಿನಗಳಲ್ಲಿ ಹೊಸಕೋಟೆ-ಮಾಲೂರು ರಸ್ತೆಯನ್ನು ₹800 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯಾಗಿ ಮಾರ್ಪಡಿಸುವ ಯೋಜನೆಯನ್ನು ಪ್ರಕಟಿಸಿದರು. ಹಿಂದಿನ ದುರಸ್ತಿಗಾಗಿ ₹10ಕೋಟಿ ವ್ಯರ್ಥವಾಗಿದೆ. ಈ ಯೋಜನೆಯಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಫೇವರ್ ಬ್ಲಾಕ್ ಇರಲಿದೆ ಮತ್ತು ರಸ್ತೆ ವಿಸ್ತರಣೆಗಾಗಿ ಯಾವುದೇ ಅಂಗಡಿಗಳನ್ನು ತೆರವುಗೊಳಿಸುವ ಅಗತ್ಯ ಇಲ್ಲ. ಸಂತೆ ಗೇಟ್ ಸರ್ಕಲ್ ಬಳಿ ವಾಹನ ದಟ್ಟಣೆ ಇರುವುದರಿಂದ ₹3ಕೋಟಿ ವೆಚ್ಚದ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ವಾರದಾಪುರ ಕೆರೆ ಕಟ್ಟೆ ಮೇಲೆ ವಾಸವಾಗಿದ್ದ 60 ಕುಟುಂಬಗಳಲ್ಲಿ ಈಗಾಗಲೇ 45 ಕುಟುಂಬಗಳಿಗೆ ಮನೆಗಳನ್ನು ನೀಡಲಾಗಿದೆ. ಉಳಿದ 13 ಕುಟುಂಬಗಳಿಗೂ ಬೇರೆಡೆ ವಸತಿ ಒದಗಿಸುವುದಾಗಿ ಶಾಸಕ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿವಿ.ಭೈರೇಗೌಡ, ಬಿ.ಎಂ.ಆರ್.ಡಿ ಅಧ್ಯಕ್ಷ ಕೇಶವಮೂರ್ತಿ, ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಸೇರಿದಂತೆ ಹಲವರು ಉಪಸ್ಥಿತಿದ್ದರು.
ನಗರದ ವರದಾಪುರದಲ್ಲಿ ಸರ್ವೇ ನಂ. 161ರ 10 ಗುಂಟೆ ಜಾಗದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆ(ನಗರ) ಅಡಿ ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನ ಮಂಡಳಿ ನಿರ್ಮಾಣ ಮಾಡಲಾಗಿರುವ ಸಿಂಗಲ್ ಬಿಎಚ್.ಕೆಯ 45 ಮನೆಗಳನ್ನು ಶಾಸಕ ಶರತ್ ಬಚ್ಚೇಗೌಡ ಫಲಾನುಭವಿಗಳಿಗೆ ವಿತರಿಸಿದರು.
ಒಂದು ಕಾಲದಲ್ಲಿ ದೇಶದ ಜನತೆ ರೋಟಿ ಕಪಡಾ ಮಕಾನ್ ಸಿಕ್ಕರೆ ಸಾಕಪ್ಪ ಎನ್ನುವಂತಹ ಸ್ಥಿತಿಯಲ್ಲಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಮೂರನ್ನು ಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಸೂರುರಹಿತರಿಗೆ ತಾಲ್ಲೂಕಿನಲ್ಲಿ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಒಟ್ಟು 494 ಮನೆಗಳು ಮಂಜುರಾಗಿದ್ದು. ಅದರಲ್ಲಿ ಇಂದು ಪ್ರಾಯೋಗಿಕವಾಗಿ ನಗರದ ವ್ಯಾಪ್ತಿಯ ವರದಾಪುರದಲ್ಲಿ 45 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತವಾದ ಜಾಗವನ್ನು ಗುರುತಿಸಿ ಮತ್ತಷ್ಟು ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ಹೊಸಕೋಟೆ ಮತ್ತು ಮಾಲೂರು ರಸ್ತೆಯನ್ನು ಅದ್ಯಾವ ಪುಣ್ಯಾತ್ಮ ಕಾಮಗಾರಿ ಮಾಡಿದ್ದನೋ ಗೊತ್ತಿಲ್ಲ. ಪ್ರತಿ ಸಲ ದುರಸ್ತಿ ಮಾಡಿಸಿ ಸಾಕಾಗಿದೆ. ಈ ರಸ್ತೆ ದುರಸ್ತೆಗೆ 10 ಕೋಟಿ ಯಷ್ಟು ವ್ಯರ್ಥವಾಗಿ ಖರ್ಚು ಮಾಡಲಾಗಿದೆ ಎಂದರೆ ಬೇಸರವಾಗುತ್ತದೆ. ಹಾಗಾಗಿ ಇದಕ್ಕೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಸು 800 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಮಾಡಲಾಗುವುದು. ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಓಡಾಟಕ್ಕಾಗಿಯೇ ಫೇವರ್ ಬ್ಲಾಕ್ ಇರಲಿದೆ. ಇನ್ನೂ ಈ ರಸ್ತೆಯಲ್ಲಿರುವ ಯಾವುದೇ ಅಂಗಡಿ ಮುಂಗಟ್ಟು ಮಾಲೀಕರು ಹುಸಿ ಮಾತುಗಳಿಗೆ ಕಿವಿಗೊಡಬೇಡಿ ಕಾಮಗಾರಿಗಾಗಿ ಯಾವುದೇ ಒಂದು ಅಂಗಡಿಯ ತೆರವು ಸಹ ಆಗಲು ಬಿಡುವುದಿಲ್ಲ ಎಂದರು. ಅದೇ ರೀತಿ ಸಂತೆ ಗೇಟ್ ಸರ್ಕಲ್ ಬಳಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ 3 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಿಸಲಾಗುವುದು ಎಂದು ಹೇಳಿದರು.
ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ನಿರ್ಮಾಣ ಮಾಡಲಾಗುವ ಈ ಪ್ರತಿ ಮನೆಗೆ 7.5 ಲಕ್ಷ ವೆಚ್ಚ ತಗುಲುತ್ತದೆ. ಆದರೆ ರಾಜ್ಯ ಸರ್ಕಾರ 5 ಲಕ್ಷ ಫಲಾನುಭವಿಯಿಂದ ಒಂದು ಲಕ್ಷ ಪಡೆದುಕೊಂಡರೆ ಕೇಂದ್ರ ಸರ್ಕಾರ 1.5 ಲಕ್ಷ ಅನುದಾನ ನೀಡುತ್ತದೆ. ಇದರಲ್ಲಿ 1.35 ಲಕ್ಷ ಜಿಎಸ್ ಟಿ ಗೆ ಹೋಗುತ್ತೆ ಇನ್ನೂ ಕೇವಲ 15 ಸಾವಿರ ಮಾತ್ರ ಕೇಂದ್ರದಿಂದ ಅನುಧಾನ ಬರುವಂತಹದ್ದು. 15 ಸಾವಿರದಲ್ಲಿ ಏನೆಲ್ಲಾ ನಿರ್ಮಾಣ ಮಾಡಬಹುದು ಎಂಬುದನ್ನು ಕೇಂದ್ರ ಸರ್ಕಾರವೇ ತಿಳಿಸಬೇಕು. 15 ಸಾವಿರ ಅನುಧಾನ ಕೊಟ್ಟು ಕೊಟ್ಟು ಪ್ರಧಾನ ಮಂತ್ರಿಯ ಆವಾಸ್ ಯೋಜನೆಯೆಂದು ನಾಮಫಲಕ ಹಾಕಬೇಕಾಗುತ್ತದೆ. ಆದರೆ 5 ಲಕ್ಷ ಕೊಡುವ ರಾಜ್ಯ ಸರ್ಕಾರದ ಹೆಸರು ಹಾಕಿಸೊಲ್ಲ ಎಂದರೆ ಇದನ್ನು ಎನ್ನಬೇಕು ಎಂದು ಹೇಳಿದರು.
ತಾಲ್ಲೂಕಿನ ದಿ ಟೌನ್ ಕೊ ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಬಲ್ಪ್ ಮಂಜು ಮಾತನಾಡಿ ವಾರದಪುರ ಕೆರೆ ಕಟ್ಟೆ ಮೇಲೆ ಹಿಂದೆ 60 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದವು. ಇದರಲ್ಲಿ ಮನೆಯಿಲ್ಲದ ಸುಮಾರು 45 ಜನರಿಗೆ ವಸತಿ ನಿರ್ಮಿಸಿ ಇಂದು ಹಂಚಿಕೆ ಮಾಡಲಾಗಿದೆ. ಇನ್ನುಳಿದ 13 ಜನಕ್ಕೆ ಬೇರೆಡೆ ವಸತಿ ಕಟ್ಟಿಸಿಕೊಡುವುದಾಗಿ ಶಾಸಕರು ಭರವಸೆಯನ್ನು ನೀಡಿದ್ದಾರೆ ಎಂದು ಬಲ್ಪ್ ಮಂಜು ಹೇಳಿದರು.
ಇದೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿವಿ.ಭೈರೇಗೌಡ, ಬಿಎಂಆರ್ ಡಿ ಅಧ್ಯಕ್ಷರಾದ ಕೇಶವಮೂರ್ತಿ, ಸದಸ್ಯರಾದ ಸುಬ್ಬರಾಜು, ಮಾಜಿ ಅಧ್ಯಕ್ಷರಾದ ವಿಜಯ್ ಕುಮಾರ್, ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಇತರರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.