ADVERTISEMENT

ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ಗೆ ಕಾಂಗ್ರೆಸ್ ಬೆಂಬಲಿತರ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:50 IST
Last Updated 18 ಡಿಸೆಂಬರ್ 2025, 2:50 IST
ಹೊಸಕೋಟೆ ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷರಾಗಿ ಬಲ್ಪ್‌ ಮಂಜಣ್ಣ ಹಾಗೂ ಉಪಾಧ್ಯಕ್ಷರಾಗಿ ಅಕ್ಬರ್‌ ಪಾಷಾ ಚುನಾಯಿತರಾಗಿದ್ದಾರೆ. ಶಾಸಕ ಶರತ್‌ ಬಚ್ಚೇಗೌಡ ಇದ್ದರು
ಹೊಸಕೋಟೆ ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷರಾಗಿ ಬಲ್ಪ್‌ ಮಂಜಣ್ಣ ಹಾಗೂ ಉಪಾಧ್ಯಕ್ಷರಾಗಿ ಅಕ್ಬರ್‌ ಪಾಷಾ ಚುನಾಯಿತರಾಗಿದ್ದಾರೆ. ಶಾಸಕ ಶರತ್‌ ಬಚ್ಚೇಗೌಡ ಇದ್ದರು   

ಹೊಸಕೋಟೆ: ನಗರದ ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಬಲ್ಪ್‌ ಮಂಜಣ್ಣ ಹಾಗೂ ಉಪಾಧ್ಯಕ್ಷರಾಗಿ ಅಕ್ಬರ್‌ ಪಾಷಾ ಚುನಾಯಿತರಾಗಿದ್ದಾರೆ. ಈ ಮೂಲಕ ಹತ್ತು ವರ್ಷದ ಬಳಿಕ ಕಾಂಗ್ರೆಸ್‌ ತೆಕ್ಕೆಗೆ ಮರಳಿದೆ.

ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ ನಿರ್ದೇಶಕರ ಆಯ್ಕೆಗೆ ಫೆ.9 ರಂದು ಚುನಾವಣೆ ನಡೆದಿತ್ತು. ಆದರೆ ಕಾನೂನು ತೊಡಕುಗಳಿಂದ ಫಲಿತಾಂಶಕ್ಕೆ ಕೋರ್ಟ್‌ ತಡೆ ನೀಡಿತ್ತು. ತೊಡಕು ನಿವಾರಣೆಯಾದ ನಂತರ ಡಿ.9 ರಂದು ಫಲಿತಾಂಶ ಬಂದಿತ್ತು. ಆದರೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆ ನಡೆದಿರಲಿಲ್ಲ. ಹೀಗಾಗಿ ಬುಧವಾರ ಚುನಾವಣೆ ನಿಗದಿಯಾಗಿತ್ತು.

ಕಾಂಗ್ರೆಸ್ ಪಕ್ಷ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಬಲ್ಪ್ ಮಂಜಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಅಕ್ಬರ್ ಪಾಷಾ ಹಾಗೂ ಬಿಜೆಪಿ ಬೆಂಬಲಿತರಾಗಿ ಅಧ್ಯಕ್ಷ ಕಿರಣ್, ವೆಂಕಟಲಕ್ಷ್ಮಮ್ಮ ಸ್ಪರ್ಧಿಸಿದ್ದರು.

ADVERTISEMENT

ಒಟ್ಟು 13 ಸದಸ್ಯರಲ್ಲಿ ಕಾಂಗ್ರೆಸ್‌ನ ಬಲ್ಪ್ ಮಂಜಣ್ಣ, ಅಕ್ಬರ್ ಪಾಷಾ ಅವರಿಗೆ ತಲಾ ಎಂಟು ಮತ ಗಳಿಸುವ ಮೂಲಕ ಜಯ ಸಾಧಿಸಿದರೆ, ಬಿಜೆಪಿಯ ಕಿರಣ್ ಮತ್ತು ವೆಂಕಟಲಕ್ಷ್ಮಮ್ಮ ಅವರು ತಲಾ ಐದು ಮತದೊಂದಿಗೆ ಪರಾಭವಗೊಂಡರು.

ಬಲ್ಪ್ ಮಂಜಣ್ಣ ಅವರನ್ನು ಅಧ್ಯಕ್ಷರನ್ನಾಗಿ, ಅಕ್ಬರ್ ಪಾಷಾ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿರುವುದಾಗಿ ಚುನಾವಣಾ ಅಧಿಕಾರಿ ಮಾದಾವರೆಡ್ಡಿಯು ಘೋಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡ, ಹೊಸಕೋಟೆ ನಗರದ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಭೈರೇಗೌಡ, ಬಿಎಂಆರ್‌ಡಿ  ಅಧ್ಯಕ್ಷ ಕೇಶವಮೂರ್ತಿ, ಮಾಜಿ ಉಪಾಧ್ಯಕ್ಷ ದ ವಿಜಯ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.