ADVERTISEMENT

ಅರಸು ಹುಟ್ಟೂರಲ್ಲಿ ಮ್ಯೂಸಿಯಂ ನಿರ್ಮಾಣ: ಸಚಿವ ಕೆ.ಎನ್‌.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 13:56 IST
Last Updated 20 ಆಗಸ್ಟ್ 2023, 13:56 IST
ಮಧುಗಿರಿಯಲ್ಲಿ ಭಾನುವಾರ ನಡೆದ ಡಿ.ದೇವರಾಜು ಅರಸು ಜಯಂತಿಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿದರು
ಮಧುಗಿರಿಯಲ್ಲಿ ಭಾನುವಾರ ನಡೆದ ಡಿ.ದೇವರಾಜು ಅರಸು ಜಯಂತಿಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿದರು   

ಮಧುಗಿರಿ: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಹುಟ್ಟೂರಿನಲ್ಲಿ ಮ್ಯೂಸಿಯಂ ನಿರ್ಮಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.

ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭಾನುವಾರ ನಡೆದ ಡಿ.ದೇವರಾಜು ಅರಸು ಅವರ 108ನೇ ಜಯಂತಿಯಲ್ಲಿ ಮಾತನಾಡಿದರು.

ಅರಸು ಹುಟ್ಟೂರಾದ ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಅವರ ಜೀವನ ಚರಿತ್ರೆ ಮತ್ತು ಸಾಧನೆ ಒಳಗೊಂಡ ಸಮಗ್ರ ಮಾಹಿತಿ ತಿಳಿಸುವ ವಸ್ತು ಸಂಗ್ರಹಾಲಯ ಆರಂಭಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಹೇಳಿದರು.

ADVERTISEMENT

ಜಯಂತಿಗೆ ಗೈರು ಹಾಜರಾಗಿರುವ ಅಧಿಕಾರಿಗಳ ಮಾಹಿತಿ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ತಹಶೀಲ್ದಾರ್ ಸಿಗ್ಬತ್ ಉಲ್ಲಾ , ತಾಲ್ಲೂಕು ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರವಣಪ್ಪ, ಬಿಇಒ ಹನುಮಂತರಾಯಪ್ಪ ಮಾತನಾಡಿದರು.

ಡಿವೈಎಸ್ ಪಿ.ಕೆ.ಎಸ್. ವೆಂಕಟೇಶ ನಾಯ್ಡು, ಸಿಪಿಐ ಹನುಮಂತರಾಯಪ್ಪ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಅನಸೂಯಮ್ಮ, ಮಾಜಿ ಗ್ರಾ.ಪಂ ಸದಸ್ಯ ಸದಾಶಿವರೆಡ್ಡಿ, ತಾಲ್ಲೂಕು ಸವಿತಾ ಸಮುದಾಯದ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖಾಧಿಕಾರಿ ಜಯರಾಮಯ್ಯ, ಅರಣ್ಯಾಧಿಕಾರಿ ರವಿ, ಪುರಸಭೆ ಮುಖ್ಯಾಧಿಕಾರಿ ಎ.ನಜ್ಮಾ, ರೋಟರಿ ಅಧ್ಯಕ್ಷ ಎಂ.ಶಿವಲಿಂಗಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮಯ್ಯ, ಖಜಾಂಚಿ ಚಿಕ್ಕರಂಗಪ್ಪ, ಶಿಕ್ಷಣ ಇಲಾಖೆಯ ದಾಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.