
ಪ್ರಜಾವಾಣಿ ವಾರ್ತೆ
ಆನೇಕಲ್: ಉರುಗನದೊಡ್ಡಿ ಸಮೀಪ ಭಾನುವಾರ ಕಂಟೇನರ್ ಲಾರಿ ಕಂದಕಕ್ಕೆ ಉರುಳಿ ಬಿದ್ದು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಚಾಲಕ ಶ್ರೀನಿವಾಸ್ (26), ಲಾರಿ ಕ್ಲೀನರ್ ಜಾರ್ಖಂಡ್‌ನ ಶ್ರೀಮಾನ್ (25) ಮೃತರು.
ಬೊಮ್ಮಸಂದ್ರದಿಂದ ಹಾರೋಹಳ್ಳಿಗೆ ತೆರಳುತ್ತಿದ್ದ ಕಂಟೇನರ್ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಶ್ರೀನಿವಾಸ್ ಮತ್ತು ಶ್ರೀಮಾನ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ನಾಲ್ವರು ಕಾರ್ಮಿಕರನ್ನು ಜಿಗಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಟೇನರ್ ಕೆಳಗೆ ಸಿಲುಕಿದ್ದ ಮೃತ ದೇಹಗಳನ್ನು ಕ್ರೇನ್ ಮೂಲಕ ಹೊರ ತೆಗೆಯಲಾಯಿತು. ಜಿಗಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.