ADVERTISEMENT

ದೇವನಹಳ್ಳಿ: ವಿಮಾನ ಪ್ರಯಾಣಿಕರಿಂದ ₹6.6 ಕೋಟಿಯ ಚಿನ್ನ ವಶ

₹1.59 ಕೋಟಿ ಮೌಲ್ಯದ ವಿದೇಶ ಕರೆನ್ಸಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 22:55 IST
Last Updated 15 ಜುಲೈ 2024, 22:55 IST
ವಿದೇಶಿ ನಗದು ಅಕ್ರಮ ಸಾಗಣೆ ವೇಳೆ ಸಿಕ್ಕಿರುವ ಹಣ
ವಿದೇಶಿ ನಗದು ಅಕ್ರಮ ಸಾಗಣೆ ವೇಳೆ ಸಿಕ್ಕಿರುವ ಹಣ   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 9ರಿಂದ ಜುಲೈ13ರವರೆಗೆ ಕಸ್ಟಮ್ಸ್‌ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ 11 ಪ್ರಕರಣ ಪತ್ತೆ ಹಚ್ಚಿ ಆರೋಪಿಗಳಿಂದ ಒಟ್ಟು ₹6.6 ಕೋಟಿ ಮೌಲ್ಯದ 9,375 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.

ದುಬೈ, ಶ್ರೀಲಂಕಾ, ಬಹರೇನ್‌, ಕೊಲೊಂಬೊದಿಂದ ಆಗಮಿಸಿದ ಎಂಟು ಪ್ರಯಾಣಿಕರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಶಾರ್ಜಾದಿಂದ ಆಗಮಿಸಿದ ಅಪರಾಧ ಹಿನ್ನೆಲೆಯ ಪ್ರಯಾಣಿಕನನ್ನು ತಪಾಸಣೆ ನಡೆಸಿದ ಕಸ್ಟಮ್ಸ್‌ ಅಧಿಕಾರಿಗಳು ₹1.59 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT
ವಶಕ್ಕೆ ಪಡೆದಿರುವ ಅಮೆರಿಕದ ಡಾಲರ್ಸ್‌
ಆರೋಪಿತರಿಂದ ವಶಕ್ಕೆ ಪಡೆಯಲಾದ ಚಿನ್ನ
ಚಿನ್ನದ ಕ್ಯಾಪ್ಸುಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.