ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ಸೋಮವಾರ ಮಧ್ಯಾಹ್ನ 12.55ರ ಸುಮಾರಿಗೆ 180 ಪ್ರಯಾಣಿಕರನ್ನು ಹೊತ್ತು ಹೊರಟ ವಿಸ್ತಾರ ವಿಮಾನ, ಗೋವಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬೀದಿನಾಯಿ ಕಾಣಿಸಿಕೊಂಡಿದ್ದರಿಂದ ವಾಪಸ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಲ್ಯಾಂಡ್ ಮಾಡಲು ಅನುಮತಿ ಕೇಳಿದಾಗ; ರನ್ ವೇ ಮೇಲೆ ಬೀದಿನಾಯಿ ಓಡಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ತಕ್ಷಣವೇ ವಿಮಾನದ ಸುರಕ್ಷತೆ ದೃಷ್ಟಿಯಿಂದ ಅವಕಾಶ ನಿರಾಕರಿಸಲಾಗಿದೆ. ಇದರಿಂದಾಗಿ ಕೆಐಎ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 3.05ಕ್ಕೆ ವಾಪಸ್ ಬರಬೇಕಾಯಿತು ಎಂದು ಏರ್‌ಲೈನ್ಸ್ ಮೂಲಗಳು ತಿಳಿಸಿವೆ.
ನಂತರ ಸಂಜೆ 4.55ಕ್ಕೆ ತೆರಳಿದ ವಿಮಾನ, ಯಾವುದೇ ಅಡಚಣೆ ಇಲ್ಲದೆ ಗೋವಾವನ್ನು 6.15ಕ್ಕೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.