ADVERTISEMENT

ದೇವನಹಳ್ಳಿಗೂ ಉಂಟು ಪೇಜಾವರ ಶ್ರೀಗಳ ನಂಟು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 12:58 IST
Last Updated 29 ಡಿಸೆಂಬರ್ 2019, 12:58 IST
ಲಕ್ಷ ದೀಪೋತ್ಸವದಲ್ಲಿ ಭಾಗಿಯಾಗಿದ್ದ ಶ್ರೀಗಳು (ಸಂಗ್ರಹ ಚಿತ್ರ)
ಲಕ್ಷ ದೀಪೋತ್ಸವದಲ್ಲಿ ಭಾಗಿಯಾಗಿದ್ದ ಶ್ರೀಗಳು (ಸಂಗ್ರಹ ಚಿತ್ರ)   

ದೇವನಹಳ್ಳಿ: ‘ಐತಿಹಾಸಿಕ ಶ್ರೀ ವೇಣುಗೋಪಾಲಸ್ವಾಮಿ ಲಕ್ಷ ದೀಪೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಶ್ರೀ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು’ ಎಂದು ಬಿಜೆಪಿ ಮುಖಂಡ ಜಿ.ಚಂದ್ರಣ್ಣ ಶ್ರೀಗಳ ಕುರಿತು ನೆನಪು ಮಾಡಿಕೊಂಡರು.

‘1998 ಡಿ.3ರಂದು ಇಲ್ಲಿನ ಶ್ರೀ ವೇಣುಗೋಪಾಲಸ್ವಾಮಿಗೆ 22 ವರ್ಷಗಳ ನಂತರ ಲಕ್ಷ ದೀಪೋತ್ಸವ ಅದ್ಧೂರಿ ಕಾರ್ಯಕ್ರಮದ ಅಂಗವಾಗಿ ಶ್ರೀ ಸಿದ್ದಗಂಗಾ ಕ್ಷೇತ್ರದ ಮಠಾಧೀಶರಾಗಿದ್ದ ಡಾ.ಶಿವಕುಮಾರಸ್ವಾಮಿ, ಆದಿಚುಂಚನಗಿರಿ ಸಂಸ್ಥಾನ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರ ಸ್ವಾಮಿ, ಡಾ.ವಾಲ್ಮಿಕಿ ಸತ್ಯಾನಂದಪುರಿ ಸ್ವಾಮಿ ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದ್ದರು’ ಎಂದರು.

‘ಹಿಂದುತ್ವವಾದಿ ಎಂದೇ ಬಿಂಬಿತವಾಗಿದ್ದ ಅವರು ಭಕ್ತರ ಆಕ್ಷೇಪವಿದ್ದರೂ ಮುಸ್ಲಿಂ ಸಮುದಾಯದ ಕಾರು ಚಾಲಕನನ್ನು ನೇಮಕ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಶ್ರೀಗಳ ನಿಧನದಿಂದ ತುಂಬಲಾರದ ನಷ್ಟವಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.