
ಬಂಧನ
ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ತಡರಾತ್ರಿ ಬ್ಯಾಂಕಾಂಕ್‌ನಿಂದ ಬಂದ ಮೂವರ ಬ್ಯಾಗ್‌ಗಳಲ್ಲಿ 17.80 ಕೆ.ಜಿ ತೂಕದ ಹೈಡ್ರೋಫೊನಿಕ್ ಗಾಂಜಾ ಪತ್ತೆಯಾಗಿದೆ. ವಶಕ್ಕೆ ಪಡೆದಿರುವ ಗಾಂಜಾ ಮೌಲ್ಯ ಸುಮಾರು ₹6.23 ಕೋಟಿ ಎಂದು ಅಂದಾಜಿಲಾಗಿದೆ.
ಮಾದಕ ವಸ್ತು ನೀಷೇಧ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟು 220 ಕೆ.ಜಿ ತೂಕದ ಹೈಡ್ರೋಫೊನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಲ್ಯಾಬ್‌ಗಳಲ್ಲಿ ನೀರು ಮತ್ತು ಪೋಷಕಾಂಶ ಬಳಸಿ ಬೆಳೆಲಾಗುವ ಹೈಡ್ರೋಫೊನಿಕ್ ಗಾಂಜಾಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಹಾಗಾಗಿ ವಿದೇಶಗಳಿಂದ ಕಳ್ಳಸಾಗಣೆ ಮಾಡಲಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೈಡ್ರೊ ಗಾಂಜಾ ಕಳ್ಳಸಾಗಣೆಗೆ ಕಡಿವಾಣ ಹಾಕಲಾಗುತ್ತಿದೆ. ಮಾದಕ ವಸ್ತು ವಿರೋಧಿ ಆಂದೋಲನದ ಭಾಗವಾಗಿ ಹೊಸ ವರ್ಷದ ಸಮಯದಲ್ಲಿ ಇನ್ನಷ್ಟು ಹೆಚ್ಚು ತಪಾಸಣೆಗಳು ನಡೆಯಲಿವೆ ಎಂದು ಕಸ್ಟಮ್ಸ್ ಆಧಿಕಾರಿಗಳು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.