ADVERTISEMENT

ದೇವರಾಜ ಅರಸ್ ಕಾಲೇಜಿಗೆ ಶೇ 96 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 2:15 IST
Last Updated 5 ನವೆಂಬರ್ 2020, 2:15 IST

ದೊಡ್ಡಬಳ್ಳಾಪುರ: ಬೆಂಗಳೂರು ವಿಶ್ವವಿದ್ಯಾಲಯ ಅಕ್ಟೋಬರ್‌ ತಿಂಗಳಲ್ಲಿ ನಡೆಸಿದ ಅಂತಿಮ ಸೆಮಿಸ್ಟರ್ ಪದವಿ ತರಗತಿಗಳ ಫಲಿತಾಂಶ ಪ್ರಕಟವಾಗಿದ್ದು, ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯಕ್ಕೆ ಬಿ.ಬಿ.ಎ ವಿಭಾಗದಲ್ಲಿ ಶೇಕಡ 96.29, ಬಿ.ಕಾಂ. ವಿಭಾಗದಲ್ಲಿ ಶೇಕಡ 91.66 ಹಾಗೂ ಬಿಎಸ್ಸಿ ವಿಭಾಗದಲ್ಲಿ ಶೇಕಡ 76.1 ಫಲಿತಾಂಶ ಲಭಿಸಿದೆ.

ಬಿಕಾಂ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. 45 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಎಂ. ಅನಿಲ್‍ಕುಮಾರ್ ಶೇಕಡ 95.7, ಎಸ್.ಬಿ. ಪ್ರಿಯಾಂಕಾ ಶೇಕಡ 95.7, ಜೆ. ಮುರಾರಿ ಶೇಕಡ 95, ಕೆ. ಸೌಮ್ಯಾ ಶೇಕಡ 93.1, ಟಿ. ಮನೋಜ್‍ಕುಮಾರ್ ಶೇಕಡ 92.5, ಯು. ಬೃಂದಾ ಶೇಕಡ 92.1, ವಿ. ಸೌಮ್ಯಾ ಶೇಕಡ 90.4 ಅಂಕ ಪಡೆದು ಉನ್ನತ ಸಾಧನೆ ಮಾಡಿದ್ದಾರೆ.

100ಕ್ಕೆ 100 ಅಂಕ: ವಿವಿಧ ವಿಷಯಗಳಲ್ಲಿ 17 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಕಾಸ್ಟ್ ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಎಂ. ಅನಿಲ್‍ಕುಮಾರ್, ಅರ್ಬಿಯಾ ಖಾನಂ, ಯು. ಬೃಂದಾ, ಇ. ಚಂದನ, ಕೆ.ಎಸ್. ಕಾವ್ಯಾ, ಟಿ. ಮನೋಜ್‍ಕುಮಾರ್, ಜೆ. ಮುರಾರಿ ಮತು ಎಸ್.ಬಿ. ಪ್ರಿಯಾಂಕಾ, ಬ್ಯುಸಿನೆಸ್ ಟ್ಯಾಕ್ಸೆಷನ್ ವಿಷಯದಲ್ಲಿ ಎಂ. ಅನಿಲ್‍ಕುಮಾರ್, ಯು. ಬೃಂದಾ, ಟಿ. ಮನೋಜ್‍ಕುಮಾರ್, ಜೆ. ಮುರಾರಿ ಹಾಗೂ ಎಸ್.ಬಿ. ಪ್ರಿಯಾಂಕಾ, ಇನ್‍ಕಮ್ ಟ್ಯಾಕ್ಸ್ ವಿಷಯದಲ್ಲಿ ಮನೋಜ್‍ಕುಮಾರ್, ಜೆ. ಮುರಾರಿ, ಪ್ರಿನ್ಸಿಪಲ್ ಪ್ರಾಕ್ಟಿಸ್ ಆಫ್ ಆಡಿಟಿಂಗ್ ವಿಷಯದಲ್ಲಿ ಎಂ. ಅನಿಲ್‍ಕುಮಾರ್, ಮ್ಯಾನೇಜ್‍ಮೆಂಟ್ ಅಕೌಂಟಿಂಗ್‍ನಲ್ಲಿ ಪ್ರಿಯಾಂಕಾ 100ಕ್ಕೆ 100 ಅಂಕ ಪಡೆದಿದ್ದಾರೆ.

ADVERTISEMENT

5 ವಿಷಯಗಳಲ್ಲಿ ಪೂರ್ಣ ತೇರ್ಗಡೆ: ಬಿಬಿಎ ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿನಿ ಉನ್ನತ ಶ್ರೇಣಿ, 24 ಮಂದಿ ಪ್ರಥಮ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 5 ವಿಷಯಗಳಲ್ಲಿ ಶೇಕಡ 100 ಫಲಿತಾಂಶ ಲಭ್ಯವಾಗಿರುವುದು ವಿಶೇಷ. ಡಿ.ಎನ್. ಹರ್ಷಿತಾ 598, ಸೀಮಾ ಫರ್ದೀನ್ 593 ಮತ್ತು ಪಿ. ವಿಮಲಾ 592 ಅಂಕಗಳನ್ನು ಪಡೆದು ಉನ್ನತ ಸಾಧನೆ ಮಾಡಿದ್ದಾರೆ. ಬಿಎಸ್ಸಿ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕೋಮಲ್ ಮೃತ್ಯುಂಜಯ ಗೋನಿ 619 ಅಂಕ ಗಳಿಸಿದ್ದಾರೆ.

ಕೋವಿಡ್-19 ಸವಾಲಿನ ನಡುವೆಯೂ ಉತ್ತಮ ಫಲಿತಾಂಶ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಲ್. ಜಾಲಪ್ಪ, ಕಾರ್ಯದರ್ಶಿ ಜಿ.ಎಚ್. ನಾಗರಾಜ, ನಿರ್ದೇಶಕ ಜೆ. ರಾಜೇಂದ್ರ, ಪ್ರಾಂಶುಪಾಲ ಪ್ರೊ.ಕೆ.ಆರ್. ರವಿಕಿರಣ್ ಮತ್ತು ಬೋಧಕ ವರ್ಗ ಅಭಿನಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.