
ವಿಜಯಪುರ (ದೇವನಹಳ್ಳಿ): ಇಲ್ಲಿನ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ತಮಗೆ ಈ ಕೂಡಲೇ ಭವಿಷ್ಯ ನಿಧಿ ಬಿಡುಗಡೆ ಮಾಡಬೇಕೆಂದು ಪೌರಕಾರ್ಮಿಕರು ಒತ್ತಾಯಿಸಿದರು.
`2012 ರಿಂದ ಒಟ್ಟು 17 ಮಂದಿಗೆ ಭವಿಷ್ಯ ನಿಧಿ ಬಿಡುಗಡೆಯಾಗಿಲ್ಲ. ಭವಿಷ್ಯ ನಿಧಿಗಾಗಿ ಅನೇಕ ಬಾರಿ ಪೌರಕಾರ್ಮಿಕರು ಭವಿಷ್ಯ ನಿಧಿ ಕಚೇರಿಗೆ ಅಲೆದಾಡಿದರೂ ಹಣ ಬಿಡುಗಡೆ ಮಾಡುತ್ತಿಲ್ಲ’ ಎಂದು ಪೌರಕಾರ್ಮಿಕ ಅಜ್ಮತ್ ದೂರಿದರು.
‘ಪ್ರಸ್ತುತ ಮನೆ ಬಾಡಿಗೆ ಕಟ್ಟಲು ಹಣ ಇಲ್ಲದಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲ. ಸಾಲ ಮಾಡಿ ಹಣ ಪಡೆದು ತಿಂಗಳಿಗೊಮ್ಮೆ ಬಡ್ಡಿ ಹಣ ಕಟ್ಟುತ್ತಿದ್ದೇವೆ. ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಈಗಲಾದರೂ ತಮಗೆ ನೀಡಬೇಕಾದ ಭವಿಷ್ಯನಿಧಿಯನ್ನು ನೀಡಬೇಕು’ ಎಂದು ಆಗ್ರಹಿಸಿದರು.
ಪೌರಕಾರ್ಮಿಕರಾದ ಎಚ್.ಕೃಷ್ಣ, ಮುನಿಯಪ್ಪ, ಆನಂದ್, ಮುತ್ಯಾಲಪ್ಪ, ಕೃಷ್ಣ, ಮಂಜುಳಾಮ್ಮ, ಅನಂತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.