ದೊಡ್ಡಬಳ್ಳಾಪುರ: ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಸಮೀಪದ ಭಕ್ತರಹಳ್ಳಿಯಲ್ಲಿ ಗ್ರಾಮದಲ್ಲಿ ಕ್ಯಾಂಟರ್ ವಾಹನದಲ್ಲಿ ಸಾಗಿಸುತ್ತಿದ್ದ ರಾಗಿ ಹುಲ್ಲಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಕಿಡಿಗಳು ಬಿದ್ದು ಸುಮಾರು ₹50 ಸಾವಿರ ಮೌಲ್ಯದ ಹುಲ್ಲು ಸುಟ್ಟು ಹೋಗಿದೆ.
ಭಕ್ತರಹಳ್ಳಿ ಗ್ರಾಮದಿಂದ ದೇವನಹಳ್ಳಿ ಕಡೆಗೆ 200 ಹೊರೆ ಹುಲ್ಲನ್ನು ಸಾಗಿಸುವ ವೇಳೆ ಕ್ಯಾಂಟರ್‌ನಲ್ಲಿ ತುಂಬಲಾಗಿದ್ದ ಹುಲ್ಲಿನ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಚಾಲಕ, ಭಕ್ತರಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಸಮೀಪ ಕ್ಯಾಂಟರ್ ನಿಲ್ಲಿಸಿ ರಸ್ತೆ ಬದಿಯಲ್ಲಿನ ತೊಟ್ಟಿಯಲ್ಲಿನ ನೀರನ್ನು ಬಳಸಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದರು. ಆದರೆ ಕ್ಯಾಂಟರ್ ಹೆಚ್ಚಿನ ಹುಲ್ಲಿಗೆ ಬೆಂಕಿ ತಗುಲಿರುವ ಕಾರಣ ಬೆಂಕಿ ತಹಬದಿಗೆ ಬರಲಿಲ್ಲ. ಹೀಗಾಗಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದರು.
ಶಾಲೆ ಬಳಿಯೇ ಈ ಘಟನೆ ನಡೆದಿದ್ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.