ದೊಡ್ಡಬಳ್ಳಾಪುರ: ನಗರದ ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿ ವತಿಯಿಂದ 9ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಭುವನೇಶ್ವರಿ ನಗರದ ಎನ್.ಮುನಿನಂಜಪ್ಪ ಅವರ ಜಮೀನಿನಲ್ಲಿ ನಡೆದ ಗಾಳಿಪಟ ಸ್ಪರ್ಧೆ ನಡೆಯಿತು.
ಮಕ್ಕಳು ಹಾರಿಬಿಟ್ಟ ವಿವಿಧ ಚಿತ್ತಾಕರ್ಷಕ ಪಟಗಳು ಬಾನಂಗಳದಲ್ಲಿ ಹಾರಾಡಿದವು. ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಗಾಳಿಪಟ ವೀಕ್ಷಣೆವೊಂದಿಗೆ ತಾವು ತಂದಿದ್ದ ಸಣ್ಣ ಪಟಗಳನ್ನು ಹಾರಿಸಿ ಖುಷಿ ಪಟ್ಟರು.
ಗಾಳಿಪಟ ಹಾರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದ ನಗರಸಭೆ ಸದಸ್ಯ ಎಚ್.ಎಸ್.ಶಿವಶಂಕರ್, ದೊಡ್ಡಬಳ್ಳಾಪುರ ಗಾಳಿಪಟ ಕಲೆಗೆ ಹೆಸರಾಗಿದೆ. ಇಲ್ಲಿನ ಗಾಳಿಪಟ ಕಲಾವಿದರು, ರಾಷ್ಟ್ರೀಯ,ಅಂತರ ರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಊರಿಗೆ ಕೀರ್ತಿ ತಂದಿದ್ದಾರೆ. ನಗರೀಕರಣದಿಂದಾಗಿ ಗಾಳಿಪಟ ಹಾರಿಸುವ ಜಾನಪದ ಕಲೆ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಗಾಳಿಪಟ ಹಾರಿಸುವ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದರು.
ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ನಗರಸಭೆ ಸದಸ್ಯ ಎಚ್.ವಿ.ಅಖಿಲೇಶ್, ಕಿರುತೆರೆ ನಟರಾದ ರಾಕೇಶ್, ಸುಷ್ಮಾ, ನಟ, ನಿರ್ಮಾಪಕ ಲಕ್ಷ್ಮೀಪತಿ, ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿ ಅಧ್ಯಕ್ಷ ಎಂ.ಎಸ್.ರಾಮದಾಸ್, ಕಾರ್ಯದರ್ಶಿ ಶಿವಶಂಕರ್, ಕನ್ನಡ ಕಟ್ಟಾಳು ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.