ದೊಡ್ಡಬಳ್ಳಾಪುರ: ಟೋಲ್ ಸಿಬ್ಬಂದಿ ಎಡವಟ್ಟಿನಿಂದಾಗಿ ಬೆಂಗಳೂರು ರಾಜ್ಯ ಹೆದ್ದಾರಿಯ ಬಾಶೆಟ್ಟಿಹಳ್ಳಿ ರೈಲ್ವೆ ಮೇಲು ಸೇತುವೆಯಲ್ಲಿ ಸರಣಿ ಅಪಘಾತ ನಡೆದಿದೆ.
ಭಾನುವಾರ ಬೆಳಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಟೋಲ್ ಸಿಬ್ಬಂದಿ ಸೇತುವೆ ಮೇಲೆ ಟೆಂಪೊ ನಿಲ್ಲಿಸಿಕೊಂಡು ರಸ್ತೆ ಬದಿ ಸಿಮೆಂಟ್ ಹಾಕುವ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ತಿರುವಿನಲ್ಲಿ ಟೆಂಪೊ ನಿಂತಿರುವುದು ಕಾಣದೆ ಬೆಂಗಳೂರು ಕಡೆಯಿಂದ ಬಂದ ಕಾರು ದಿಢೀರನೆ ಬ್ರೆಕ್ ಹಾಕಿದ ಪರಿಣಾಮ ಸುಮಾರು ಐದಕ್ಕೂ ಹೆಚ್ಚಿನ ಕಾರುಗಳು ಸರಣಿ ಅಪಘಾತಕ್ಕೆ ಒಳಗಾಗಿವೆ.
ಕಾಮಗಾರಿಗೂ ಮುನ್ನ ಬ್ಯಾರಿಕೇಟ್ ಮತ್ತು ಸೂಚನೆ ಫಲಕ ಅಳವಡಿಸದೆ ಕಾಮಗಾರಿ ನಡೆಸಿದ್ದರಿಂದ ಸರಣಿ ಅಪಘಾತವಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.
ಅಪಘಾತದಿಂದ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚಿನ ಸಮಯ ವಾಹನ ದಟ್ಟಣೆ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.